- Advertisement -
![]()
- Advertisement -
ಪುತ್ತೂರು: ಆಟೋ ರಿಕ್ಷಾ ಡಿಕ್ಕಿಯಾಗಿ ಹೋಟೆಲ್ ಮಾಲೀಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೌಡಿಚ್ಚಾರಿನಿಂದ ಮುಡಿಪಿನಡ್ಕ ಸಂಪರ್ಕ ರಸ್ತೆಯ ಪಾಪೆಮಜಲು ಬಳಿ ಶುಕ್ರವಾರ ರಾತ್ರಿ ನಡೆದಿದೆ. ಕೌಡಿಚ್ಚಾರಿನಲ್ಲಿರುವ ದುರ್ಗಾಪ್ರಸಾದ್ ಹೊಟೇಲ್ ಮಾಲೀಕ ಸುಭಾಷ್ ಕುಲಾಲ್ (50) ಮೃತರು.
ಸುಭಾಷ್ ಕುಲಾಲ್ ಅವರು ರಾತ್ರಿ ಹೊಟೇಲ್ ಕೆಲಸ ಮುಗಿಸಿ ಪಾಪೆಮಜಲು ಕಡೆಗೆ ರಿಕ್ಷಾದಲ್ಲಿ ತೆರಳುತ್ತಿದ್ದರು. ಈ ವೇಳೆ ಪಾಪೆಮಜಲು ಬಳಿ ಇಳಿದು ರಸ್ತೆ ದಾಟುತ್ತಿದ್ದಾಗ ರಿಕ್ಷಾವೊಂದು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಢಿಕ್ಕಿ ಹೊಡೆದ ರಿಕ್ಷಾದ ಚಾಲಕ, ಮಹಿಳೆ ಗಾಯಗೊಂಡಿದ್ದಾರೆ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
- Advertisement -


