Wednesday, June 3, 2026
Homeತಾಜಾ ಸುದ್ದಿಬಾಗಲಕೋಟೆಯಲ್ಲೊಂದು ಅಚ್ಚರಿಯ ಘಟನೆ: ದೇವಾಲಯದ ಮುಂದೆ ನಿಂತು 20 ನಿಮಿಷ ಪ್ರಾರ್ಥಿಸಿದ ಕುದುರೆ

ಬಾಗಲಕೋಟೆಯಲ್ಲೊಂದು ಅಚ್ಚರಿಯ ಘಟನೆ: ದೇವಾಲಯದ ಮುಂದೆ ನಿಂತು 20 ನಿಮಿಷ ಪ್ರಾರ್ಥಿಸಿದ ಕುದುರೆ

- Advertisement -
- Advertisement -

ಬಾಗಲಕೋಟೆ: ಪ್ರಕೃತಿಯಲ್ಲಿ ನಡೆಯುವ ಕೆಲವೊಂದು ಅಚ್ಚರಿಗಳು ನಮ್ಮಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟಿ ಹಾಕುತ್ತವೆ. ಇಂತಹದ್ದೇ ಅಚ್ಚರಿಯ ಘಟನೆಯೊಂದು ಬಾಗಲಕೋಟೆ ತಾಲೂಕಿನ ಮುರನಾಳ ಗ್ರಾಮದಲ್ಲಿ ನಡೆದಿದೆ.

ಹೌದು… ಬಾಗಲಕೋಟೆ ತಾಲೂಕಿನ ಮುರನಾಳ ಗ್ರಾಮದ ಪುನರ್ ವಸತಿ ಕೇಂದ್ರದ ಸಮೀಪವಿರುವ ಆಂಜನೇಯನ ಗುಡಿ ಮುಂದೆ ಕುದುರೆಯೊಂದು 20 ನಿಮಿಷಗಳ ಕಾಲ ಪ್ರಾರ್ಥನಾ ಭಂಗಿಯಲ್ಲಿ ನಿಂತು ಅಚ್ಚರಿಗೆ ಕಾರಣವಾಗಿದೆ.

ಪುಟ್ಟ ಆಂಜನೇಯ ಸ್ವಾಮಿ ಗುಡಿಗೆ ತಲೆ ಕೊಟ್ಟು ಕುದುರೆ ಪ್ರಾರ್ಥನೆ ಮಾಡುವ ರೀತಿಯಲ್ಲಿ ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನಿಂತು ಕೊಂಡಿದೆ.ಕುದುರೆ ದೇವರ ಗುಡಿಯ ಕಟ್ಟಡಕ್ಕೆ ಹಣೆ ಕೊಟ್ಟು ನಿಂತರು ಹಾವ-ಭಾವ ನೋಡಿ ಸ್ಥಳೀಯರು ಹಾಗೂ ದಾರಿಹೋಕರು ಆಶ್ಚರ್ಯಗೊಂಡಿದ್ದಾರೆ. ಅಲ್ಲದೇ ಕೆಲವರು ವಿಡಿಯೋ ಕೂಡ ಮಾಡಿದ್ದಾರೆ.

- Advertisement -

Latest News

error: Content is protected !!