Thursday, June 4, 2026
Homeತಾಜಾ ಸುದ್ದಿಎಷ್ಟು ಕೊಟ್ಟರೆ ಬರ್ತಿಯಾ? ಕನ್ನಡದ ಹೆಸರಾಂತ ಗಾಯಕಿಗೆ ಅಶ್ಲೀಲ ಸಂದೇಶ

ಎಷ್ಟು ಕೊಟ್ಟರೆ ಬರ್ತಿಯಾ? ಕನ್ನಡದ ಹೆಸರಾಂತ ಗಾಯಕಿಗೆ ಅಶ್ಲೀಲ ಸಂದೇಶ

- Advertisement -
- Advertisement -

ಬೆಂಗಳೂರು: ಇತ್ತೀಚೆಗೆ ಚಿತ್ರ ನಟಿಯರ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಲೈಂಗಿಕ ಕಿರುಕುಳ, ದೌರ್ಜನ್ಯ ನಡೆಯುವ ಪ್ರಕರಣಗಳು ಹೆಚ್ಚುತ್ತಿವೆ. ಫೇಸ್ಬುಕ್ ಇನ್ಸ್ಟಾಗ್ರಾಮ್ ಗಳಲ್ಲಿ ಸೆಲೆಬ್ರಿಟಿಗಳ ಮಾದಕ ಫೋಟೋಗಳನ್ನು ನೋಡಿ ಕೆಲವು ದುರುಳರು ಅಶ್ಲೀಲ ಸಂದೇಶ ಕಳುಹಿಸುವುದು ಎಗ್ಗಿಲ್ಲದೆ ಸಾಗುತ್ತಿದೆ. ಇದೀಗ ಕನ್ನಡದ ಉದಯೋನ್ಮುಖ ಗಾಯಕಿ ಸಂಗೀತಾ ರಾಜೀವ್ ಇಂತಹದ್ದೇ ಪ್ರಸಂಗ ಎದುರಿಸಿದ್ದಾರೆ.

ವ್ಯಕ್ತಿಯೊಬ್ಬ ಸಂಗೀತ ರಾಜೀವ್ ಅವರ ಫೋಟೋಗಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಲ್ಲದೇ ಇನ್ ಸ್ಟಾಗ್ರಾಂ ಖಾತೆಗೆ ‘ಒಂದು ರಾತ್ರಿಗೆ ನಿನ್ನ ರೆಟ್ ಎಷ್ಟು ?’ ಎಂಬುದಾಗಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ. ಮೊದಲಿಗೆ ಸುಮ್ಮನಿದ್ದ ಗಾಯಕಿ ಈತನ ಹುಚ್ಚುತನ ಅತಿರೇಕಕ್ಕೇರಿದಾಗ ಧೈರ್ಯದಿಂದ ಪ್ರತಿಕ್ರಿಯೆ ನೀಡಿದ್ದಾರೆ. ಈತನ ಸಂದೇಶದ ಸ್ಕ್ರೀನ್ ಶಾಟ್ ಸಮೇತ ಪೋಸ್ಟ್ ಮಾಡಿರುವ ಸಂಗೀತಾ ‘ನಿನ್ನ ತಾಯಿಗೋ ತಂಗಿಗೋ ಇದೇ ಪ್ರಶ್ನೆ ಕೇಳುತ್ತೀಯಾ? ಎಂದು ತಿರುಗೇಟು ನೀಡಿದ್ದಾರೆ.

ಇಲ್ಲಿಯವರೆಗೂ ಇಂತಹ ಅನೇಕ ಸಂದೇಶಗಳನ್ನು ಕಡೆಗಣಿಸಿದ್ದೇನೆ. ಆದರೆ ಈ ಮನುಷ್ಯ ಸಂಸ್ಕೃತಿಯನ್ನೇ ಮರೆತು ಮಾತನಾಡಿದ್ದಾನೆ. ಈ ಬಾರಿ ಈತನ ಹೆಸರು ಬ್ಲರ್ ಮಾಡಿದ್ದೇನೆ. ಆದರೆ ಮುಂದೆ ಇಂತಹ ಕೆಲಸ ಮಾಡಿದರೆ ಹೆಸರು ಸಮೇತ ಪ್ರಕಟಿಸಿ ಮರ್ಯಾದೆ ತೆಗೆಯಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ತೀರ್ಪುಗಾರರ ಪ್ಯಾನೆಲ್ ನಲ್ಲಿ ಒಬ್ಬರಾಗಿರುವ ಸಂಗೀತಾ ಇತ್ತೀಚೆಗಷ್ಟೇ ಶೈನ್ ಶೆಟ್ಟಿಯೊಂದಿಗೆ ಆಲ್ಬಮ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು.

- Advertisement -

Latest News

error: Content is protected !!