Wednesday, June 24, 2026
Homeಕರಾವಳಿಬೆಳ್ತಂಗಡಿಯ ಕುಂಡಡ್ಕದಲ್ಲಿ ನಾಗಬನದ ಪೂಜೆ ವೇಳೆ ಜೇನು ದಾಳಿ

ಬೆಳ್ತಂಗಡಿಯ ಕುಂಡಡ್ಕದಲ್ಲಿ ನಾಗಬನದ ಪೂಜೆ ವೇಳೆ ಜೇನು ದಾಳಿ

- Advertisement -
- Advertisement -

ಬೆಳ್ತಂಗಡಿ: ನಾಗಬನದ ಪೂಜೆ ನಡೆಯುತ್ತಿದ್ದಾಗ ಹೆಜ್ಜೆನು ದಾಳಿ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕುಂಡಡ್ಕದ ಅರುವಾಲು ಬಾಲಕೃಷ್ಣ ಮನೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಅರುವಾಲು ಮನೆಯಿಂದ ಎರಡು ಕಿ.ಮೀ ದೂರದಲ್ಲಿ ಇರುವ ನಾಗಬನದಲ್ಲಿ ಇಂದು ಬೆಳಗ್ಗೆ ಬಾಲಕೃಷ್ಣ ಮತ್ತು ಅವರ ಕುಟುಂಬಸ್ಥದರುಪೂಜೆಯಲ್ಲಿ ಭಾಗಿಯಾಗಿದ್ದು ಈ ಸಂದಂರ್ಭದಲ್ಲಿ ಪೂಜೆ ನಡೆಯುತ್ತಿದ್ದಾಗ ಪೂಜೆಯ ಮಾಡುತ್ತಿದ್ದ ಹೊಗೆ ಜೇನು ಗೂಡಿಗೆ ಹೋಗಿದ್ದು ಈ ವೇಳೆ ಸ್ಥಳದಲ್ಲಿದ್ದ ಸುಮಾರು 25 ಜನರಿಗೆ ಹೆಜ್ಜೆನು ದಾಳಿ ಮಾಡಿದೆ.

ಇದರಲ್ಲಿ ಏಂಟು ಮಂದಿಯಾದ ಉಮೇಶ್(40), ರಾಧ(35), ವಿನೀತ್(15) , ಕುನ್ಯಪ್ಪ(70),ಕಮಲ(55), ರತ್ನಕರ(50),ಭಾರತಿ(45), ಶೀನ(40) ಗಂಭೀರ ಗಾಯಗೊಂಡಿದ್ದು ಅವರನ್ನು ಉಜಿರೆ ಬೆನಕ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇನ್ನೂ ಕೆಲವರನ್ನು ಸ್ಥಳೀಯ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಪೂಜೆ ಮಾಡುತ್ತಿದ್ದ ಮೂವರು ಅರ್ಚಕರಲ್ಲಿ ಇಬ್ಬರಿಗೆ ಹೆಜ್ಜೆನು ದಾಳಿ ಮಾಡಿದೆ.

- Advertisement -

Latest News

error: Content is protected !!