ಕಾರ್ಕಳ: ಹೋಮ್ ನರ್ಸ್ ಗೂಗಲ್ ಪೇ ಮೂಲಕ ಮನೆ ಮಾಲೀಕನ ಖಾತೆಯಿಂದ ತನ್ನ ಖಾತೆಗೆ 9.80 ಲಕ್ಷ ವರ್ಗಾಯಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಕಾರ್ತಿಕ್ ಶೆಟ್ಟಿ ಹಣ ವಂಚಿಸಿದ ಅರೋಪಿ.
ಈ ಬಗ್ಗೆ ಕಸಬಾ ಗ್ರಾಮದ ಶಶಿಧರ್ (75) ಅವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಸಬಾ ಗ್ರಾಮದ ಶಶಿಧರ್ ಅವರ ಕೋರಿಕೆ ಯಂತೆ ಅಲೈಟ್‌ಕೇ ಸಂಸ್ಥೆಯ ರತ್ನಾಕರ್ ಅವರು ಹೋಮ್ ನರ್ಸ್ ಆಗಿ ಕಾರ್ತಿಕ್‌ನನ್ನು ನೇಮಿಸಿದ್ದು, ಅವರನ್ನು ಈ ಪ್ರಕರಣದಲ್ಲಿ 2ನೇ ಆರೋಪಿಯನ್ನಾಗಿ ಮಾಡಲಾಗಿದೆ. 1ನೇ ಆರೋಪಿ ಕಾರ್ತಿಕ್ ಶೆಟ್ಟಿ ಹೋಂ ನರ್ಸ್ ಆಗಿ ಶಶಿಧರ್ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ವೇಳೆ ಶಶಿಧರ್ ಮೊಬೈಲ್‌ನಲ್ಲಿ ಹಣ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಅವರ ಗೂಗಲ್ ಪೇ ಪಿನ್ ನಂಬರ್ ಅನ್ನು ಗಮನಿಸಿದ್ದ.
ಈ ಪಿನ್ ಅನ್ನು ಬಳಸಿ ಕಾರ್ತಿಕ್, ಶಶಿಧರ್ ಅವರ ಖಾತೆಯಿಂದ 9.80 ಲಕ್ಷ ರೂ. ಹಣವನ್ನು ತನ್ನ ಖಾತೆಗೆ ಗೂಗಲ್ ಪೇ ಮುಖಾಂತರವೇ ವರ್ಗಾವಣೆ ಮಾಡಿದ್ದಾನೆ. ಈ ಬಗ್ಗೆ ಶಶಿಧರ್ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.