Monday, April 29, 2024
Homeಕರಾವಳಿಬೆಳ್ತಂಗಡಿ: ಭಜರಂಗದಳ ನಿಷೇಧದ ನಿರ್ಧಾರಕ್ಕೆ ಮತದಾನದ ದಿನ ಹಿಂದೂ ಸಮಾಜ ಉತ್ತರ ನೀಡಲಿದೆ - ಹರೀಶ್‌...

ಬೆಳ್ತಂಗಡಿ: ಭಜರಂಗದಳ ನಿಷೇಧದ ನಿರ್ಧಾರಕ್ಕೆ ಮತದಾನದ ದಿನ ಹಿಂದೂ ಸಮಾಜ ಉತ್ತರ ನೀಡಲಿದೆ – ಹರೀಶ್‌ ಪೂಂಜ

spot_img
- Advertisement -
- Advertisement -

ಬೆಳ್ತಂಗಡಿ: ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳದ ಸಂಘಟನೆಯನ್ನು ನಿಷೇಧಿಸುವ ಕುರಿತು ಆಶ್ವಾಸನೆ ನೀಡಿದ್ದು ಬೆಳ್ತಂಗಡಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಅವರು ಖಂಡಿಸಿದ್ದಾರೆ.

ಲವ್ ಜಿಹಾದ್, ಗೋ ಹತ್ಯೆಯಂತಹ ಸಮಾಜ ವಿರೋಧಿ ಚಟುವಟಕೆಗಳ ವಿರುದ್ಧ ಸದಾ ಗುಡುಗುವ ಭಜರಂಗದಳ ಸಂಘಟನೆಯನ್ನು ನಿಷೇಧಿಸುವುದು ಮೂರ್ಖತನದ ನಿರ್ಧಾರ. ಭಯೋತ್ಪಾದನೆಯ ವಿರುದ್ಧ ರಾಷ್ಟ್ರ ಜಾಗೃತಿಯ ಕೆಲಸ ಮಾಡುತ್ತಿರುವ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಕ್ತಿ ತುಂಬಿದ ಭಜರಂಗದಳವನ್ನು, ಹಳ್ಳಿಹಳ್ಳಿಯಲ್ಲಿರುವ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರದ ಮೂಲಕ ಸಂರಕ್ಷಣೆ ಮಾಡುತ್ತಿರುವ ಭಜರಂಗದಳ ಸಂಘಟನೆಯನ್ನು ನಿಷೇಧಿಸುವ ಆಶ್ವಾಸನೆಯನ್ನು ಕಾಂಗ್ರೆಸ್‌ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡುವ ಮೂಲಕ ರಾಜ್ಯದಲ್ಲಿ ತಾಲಿಬಾನ್‌ ಮಾದರಿಯ ಆಡಳಿತ ನಡೆಸಲು ಹೊರಟಿದೆ.

ಕಾಂಗ್ರೆಸ್‌ ಪಕ್ಷದ ಈ ನಿರ್ಧಾರ ಹಿಂದೂ ದಮನಕಾರಿ ನೀತಿಯನ್ನು ಪ್ರದರ್ಶಿಸುತ್ತಿದೆ. ಕಾಂಗ್ರೆಸ್ಸಿನ ಈ ಹಿಂದೂ ವಿರೋಧಿ ನೀತಿಗೆ ಮತದಾನದ ದಿನ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ. ಕಾಂಗ್ರೆಸ್‌ ಪಕ್ಷದ ಹಿಂದೂ ವಿರೋಧಿ ನೀತಿಯಿಂದಲೇ ಕಾಂಗ್ರೆಸ್‌ ಮುಕ್ತವಾಗಲಿದೆ ಎಂದರು.

- Advertisement -
spot_img

Latest News

error: Content is protected !!