Sunday, June 7, 2026
Homeತಾಜಾ ಸುದ್ದಿಅತ್ಯಾಚಾರವೆಸಗಿ ಬ್ಲಾಕ್'ಮೇಲ್ ಮಾಡಿದರು; ಹಿಂದೂ ಯುವತಿ ಪಾಕಿಸ್ತಾನದಲ್ಲಿ ಆತ್ಮಹತ್ಯೆಗೆ ಶರಣು

ಅತ್ಯಾಚಾರವೆಸಗಿ ಬ್ಲಾಕ್’ಮೇಲ್ ಮಾಡಿದರು; ಹಿಂದೂ ಯುವತಿ ಪಾಕಿಸ್ತಾನದಲ್ಲಿ ಆತ್ಮಹತ್ಯೆಗೆ ಶರಣು

- Advertisement -
- Advertisement -

ಸಿಂಧ್: ಪಾಕಿಸ್ತಾನದ ಥರ್ಪಾರ್ಕರ್ ಜಿಲ್ಲೆಯಲ್ಲಿ 2019ರ ಜುಲೈ ತಿಂಗಳಿನಲ್ಲಿ 17 ವರ್ಷದ ಹಿಂದೂ ಯುವತಿ ಮೇಲೆ ಅತ್ಯಾಚಾರ ನಡೆದಿತ್ತು, ಅತ್ಯಾಚಾರ ವೆಸಗಿದ ಆರೆೋಪಿಗಳು ಪದೇ ಪದೇ ಬ್ಲಾಕ್ ಮೇಲ್ ಮಾಡಿದ್ದಾರೆ. ಅತ್ಯಾಚಾರವೆಸಗಿದ ಕಾಮುಕರು ಬ್ಲಾಕ್’ಮೇಲ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನೊಂದ ಹಿಂದೂ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪ್ರಭಾವಿ ವ್ಯಕ್ತಿಗಳಾಗಿರುವ ಅತ್ಯಾಚಾರಿಗಳು ಪ್ರಕರಣ ಸಂಬಂಧ ಜಾಮೀನು ಪಡೆದು ಬಿಡುಗಡೆಗೊಂಡಿದ್ದಾರೆಂದು ಹೇಳಲಾಗುತ್ತಿದ್ದು, ಆರೋಪಿಗಳು ಯುವತಿಗೆ ಬ್ಲಾಕ್’ಮೇಲ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ನೊಂದ ಯುವತಿ ಬಾವಿಯೊಂದಕ್ಕೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ವರದಿಗಳು ತಿಳಿಸಿವೆ.

ಘಟನೆ ಸಂಬಂಧ ಇದೀಗ ಪ್ರತಿಭಟನೆಗಳು ಭುಗಿಲೆದ್ದಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳು ಆಗ್ರಹಿಸುತ್ತಿವೆ. ಘಟನೆ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಅಬ್ದುಲ್ಲಾ ಅಹ್ಮೆದ್ಯಾರ್ ಯುವತಿ ಮೇಲೆ ಅತ್ಯಾಚಾರ ನಡೆದಿರುವುದು ವೈದ್ಯಕೀಯ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!