Friday, May 3, 2024
HomeUncategorizedಮಂಗಳೂರು: ದಿನೇಶ್ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿ ಎಸ್ಡಿಪಿಐ ಯಿಂದ ಪಾದಯಾತ್ರೆ

ಮಂಗಳೂರು: ದಿನೇಶ್ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿ ಎಸ್ಡಿಪಿಐ ಯಿಂದ ಪಾದಯಾತ್ರೆ

spot_img
- Advertisement -
- Advertisement -

ಮಂಗಳೂರು: ಬೆಳ್ತಂಗಡಿಯಲ್ಲಿ ಹತ್ಯೆ ಗೀಡಾದ ದಲಿತ ಯುವಕ ದಿನೇಶ್ ಕನ್ಯಾಡಿ ಕುಟುಂಬ ಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿ ಎಸ್ಟಿಪಿಐ ವತಿಯಿಂದ ಮಾ.15,16,17 ರಂದು ಬೆಳ್ತಂಗಡಿಯಿಂದ ದ.ಕ ಜಿಲ್ಲಾ ಧಿಕಾರಿ ಕಚೇರಿ ವರೆಗೆ ಪಾದಯಾತ್ರೆ ನಡೆಯಲಿದೆ ಎಂದು ದ.ಕ.ಜಿಲ್ಲಾ ಧ್ಯಕ್ಷ ಅಬೂಬಕ್ಕರ್ ಕುಳಾಯಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.


ಸರ್ಕಾರ ದಿನೇಶ್ ಕುಟುಂಬ ಕ್ಕೆ ನ್ಯಾಯ ದೊರಕಿಸಿ ಕೊಡುವ ಬದಲು ತಾರತಮ್ಯ ಮಾಡುತ್ತಿದೆ. ಶಿವಮೊಗ್ಗದ ಕ್ರಿಮಿನಲ್ ಹಿನ್ನಲೆಯ ವ್ಯಕ್ತಿ ಸಾವಿಗೀಡಾದಾಗ ರಾಜ್ಯ ಸರಕಾರ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ಪರಿಹಾರ ಅವರ ಕುಟುಂಬ ಕ್ಕೆ ನೀಡಲಾಗಿದೆ. ಸರಕಾರದ ಶಾಸಕರು, ಸಚಿವರು ಅಲ್ಲಿ ಗೆ ಭೇಟಿ ನೀಡಿದ್ದಾರೆ.


ಆದರೆ ಬೆಳ್ತಂಗಡಿಯ ದಲಿತ ಯುವಕನ ಮನೆಗೆ ಯಾವ ಸಚಿವರು ಭೇಟಿ ನೀಡಿಲ್ಲ.ಸೂಕ್ತ ಪರಿಹಾರ ನೀಡುವ ಬಗ್ಗೆಯ ಕ್ರಮವೂ ನಡೆದಿಲ್ಲ. ಇದನ್ನು ಪಕ್ಷ ಖಂಡಿಸುತ್ತದೆ ಕನ್ಯಾಡಿ ಯ ದಿನೇಶ್ ಕುಟುಂಬ ಕ್ಕೂ 50ಲಕ್ಷ ರೂ.ಪರಿಹಾರ ನೀಡಬೇಕು, ಅವರ ಕುಟುಂಬ ದ ಸದಸ್ಯ ರೊಬ್ಬರಿಗೆ ಸರಕಾರಿ ಕೆಲಸ ನೀಡಬೇಕು. ಎರಡು ಎಕರೆ ಸರಕಾರಿ ಭೂಮಿ ನೀಡಬೇಕು. ಹತ್ಯೆ ಮಾಡಿದ ಅಪರಾಧಿ ಗಳಿಗೆ ಕಠಿಣ ಶಿಕ್ಷೆ ಯಾಗಬೇಕು ಎಂದು ಅಬೂಬಕ್ಕರ್ ಆಗ್ರಹಿಸಿದರು.


ಸುದ್ದಿ ಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್, ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!