Monday, May 6, 2024
Homeತಾಜಾ ಸುದ್ದಿಕ್ರಿಸ್‌ಮಸ್‌ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಕತ್ತರಿಹಾಕಿದ ಜಿಲ್ಲಾಡಳಿತ-ಕೋವಿಡ್ ಹಿನ್ನೆಲೆ ಇಲ್ಲಿದೆ ಆಚರಣೆಗಳ ಮಾರ್ಗಸೂಚಿ!..

ಕ್ರಿಸ್‌ಮಸ್‌ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮಕ್ಕೆ ಕತ್ತರಿಹಾಕಿದ ಜಿಲ್ಲಾಡಳಿತ-ಕೋವಿಡ್ ಹಿನ್ನೆಲೆ ಇಲ್ಲಿದೆ ಆಚರಣೆಗಳ ಮಾರ್ಗಸೂಚಿ!..

spot_img
- Advertisement -
- Advertisement -

ಬೆಂಗಳೂರು: ಕ್ರಿಸ್‌ಮಸ್‌ ಹಬ್ಬ ಮತ್ತು ಹೊಸ ವರ್ಷದ ಸಂಭ್ರಮವನ್ನು ಸರಳವಾಗಿ ಆಚರಿಸಬೇಕು ಎಂದು ಆಯಾ ಜಿಲ್ಲಾಡಳಿತ ತಿಳಿಸಿದೆ. ಕೋವಿಡ್ ನಿಯಂತ್ರಣ ಮತ್ತು ಜಾಗ್ರತೆಗೆ ಸಂಬಂಧಿಸಿ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ನೀಡಿದ್ದು, ಈ ಆದೇಶ ಡಿ. 31ರವರೆಗೆ ಜಾರಿಯಲ್ಲಿರಲಿದೆ. ಇದರ ಅಡಿಯಲ್ಲಿ ಡಿ.ಜೆ. ಹಾಕಿ ವಿಶೇಷ ನೃತ್ಯ ಮಾಡುವುದು, ಸಾಮೂಹಿಕವಾಗಿ ಸೇರಿ ಪಾರ್ಟಿ ಮಾಡಲು ಅವಕಾಶವಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

65 ವರ್ಷ ಮೇಲಿನ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರಬೇಕು.ಚರ್ಚ್‌ಗಳಲ್ಲಿ ಒಮ್ಮೆಲೇ ಹೆಚ್ಚು ಜನರು ಸೇರಲು ಅವಕಾಶವಿಲ್ಲ. ಅಂತರ ಕಾಯ್ದುಕೊಳ್ಳಬೇಕು. ಹಸಿರು ಪಟಾಕಿ ಬಿಟ್ಟು ಬೇರೆ ಸಿಡಿಮದ್ದು ಬಳಸುವಂತಿಲ್ಲ. ಸಾರ್ವಜನಿಕ ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧಿಸಲಾಗಿದೆ. ಕ್ಲಬ್, ಪಬ್, ರೆಸ್ಟೊರಂಟ್ ಹಾಗೂ ಅದೇ ತೆರನಾದ ಸ್ಥಳಗಳಲ್ಲಿ ಜನ ಸೇರಿ ಪಾರ್ಟಿ ಮಾಡುವಂತಿಲ್ಲ.ಕಾರ್ಯಕ್ರಮಗಳಲ್ಲಿ ಕಡ್ಡಾಯವಾಗಿ ಅಂತರವನ್ನು ಕಾಯ್ದುಕೊಳ್ಳಲು ತಿಳಿಸಲಾಗಿದೆ.

- Advertisement -
spot_img

Latest News

error: Content is protected !!