Friday, June 5, 2026
Homeಕರಾವಳಿಸುಳ್ಯ: ರಾತ್ರಿಯಿಡೀ ಸುರಿದ ಭಾರೀ ಮಳೆ; ಸಂಪಾಜೆ ಭಾಗದಲ್ಲಿ ಮನೆ, ತೋಟಗಳು ಜಲಾವೃತ

ಸುಳ್ಯ: ರಾತ್ರಿಯಿಡೀ ಸುರಿದ ಭಾರೀ ಮಳೆ; ಸಂಪಾಜೆ ಭಾಗದಲ್ಲಿ ಮನೆ, ತೋಟಗಳು ಜಲಾವೃತ

- Advertisement -
- Advertisement -

ಸುಳ್ಯ: ಶುಕ್ರವಾರ ರಾತ್ರಿಯಿಂದ ಬಳಿಕ ಭಾರೀ ಮಳೆ ಯಾಗುತ್ತಿದ್ದು ಅಲ್ಲಲ್ಲಿ ಹಾನಿ ಸಂಭವಿಸಿದೆ. ಸಂಪಾಜೆ ಗ್ರಾಮದಲ್ಲಿ ಅಲ್ಲಲ್ಲಿ ಬರೆ ಕುಸಿತ ಉಂಟಾಗಿದ್ದು ಗೂನಡ್ಕ ದರ್ಖಾಸಿನ ಗಣೇಶ್ ಭಟ್ ಎಂಬವರ ಮನೆಗೆ ಹಾನಿಯಾಗಿದೆ ಧರಣಿ ದಯಾನಂದ ಎಂಬವರ ಮನೆ ಜಲಾವೃತ ವಾಗಿದೆ.

ಹಲವು ಮನೆಗಳಿಗೆ ನೀರು ನುಗ್ಗಿದೆ.ಸಂಪಾಜೆ ಜ್ಯೂನಿಯರ್ ಕಾಲೇಜಿನ ಸಂಪಾಜೆ ಯಲ್ಲಿ ಮನೆಗಳಿಗೆ ಹಾನಿ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರೆ ಕುಸಿತ ಉಂಟಾಗಿದೆ. ಕಣಿಗಳು ಬ್ಲಾಕ್ ಆಗಿದೆ.

ಪಯಸ್ವಿನಿ ನದಿ ಹಾಗು ಇತರ ಹಳ್ಳ ಕೊಳ್ಳಗಳು ತುಂಬಿ ಹರಿದಿದೆ.ಪೇರಡ್ಕ-ದರ್ಕಾಸ್ ಸಂಪರ್ಕ ಕಡಿತಗೊಂಡಿದೆ. ಅಲ್ಲಲ್ಲಿ ತೋಟಗಳಿಗೆ ನೀರು ನುಗ್ಗಿದೆ. ಅಬೂ ಸಾಲಿ,ಜಿ.ಜಿ.ಶಿವಾನಂದ,ಜಿ.ಜಿ.ಹಿಮಕರ, ಚಂದ್ರ ಅವರ ತೋಟಗಳು ಸೇರಿ ಹಲವು ತೋಟಗಳಿಗೆ, ಕೃಷಿ ಭೂಮಿಗೆ, ನದೀ ಪಾತ್ರದ ಪ್ರದೇಶಗಳು ಜಲಾವೃತ ವಾಗಿದೆ.

ಹಲವು ಕಡೆಗಳಲ್ಲಿ 3 ನೀರು ನುಗ್ಗಿ ಆವಾಂ ತರ ಸೃಷ್ಠಿಸಿದೆ. ಕಳೆದ ಕೆಲವು ದಿನಗಳಿಂದ ಭೂ ಕಂಪನ ಆತಂಕ ಸೃಷ್ಠಿಸಿರುವ ಸಂಪಾಜೆಯಲ್ಲಿ ಈಗ ಮಳೆ ಆವಾಂತರ ಸೃಷ್ಠಿಸಿದೆ.ಊರುಬೈಲು ಭಾಗದಲ್ಲಿಯೂ ಬರೆಕುಸಿತ ಉಂಟಾಗಿದ್ದು ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

- Advertisement -

Latest News

error: Content is protected !!