Thursday, June 4, 2026
Homeಕರಾವಳಿಭಾರೀ ಮಳೆಗೆ ಉಕ್ಕಿ ಹರಿದ ಪಯಸ್ವಿನಿ ನದಿ: ಮಧ್ಯರಾತ್ರಿ ಜಲಾವೃತವಾದ ಕಲ್ಲುಗುಂಡಿ ಪೇಟೆ

ಭಾರೀ ಮಳೆಗೆ ಉಕ್ಕಿ ಹರಿದ ಪಯಸ್ವಿನಿ ನದಿ: ಮಧ್ಯರಾತ್ರಿ ಜಲಾವೃತವಾದ ಕಲ್ಲುಗುಂಡಿ ಪೇಟೆ

- Advertisement -
- Advertisement -

ಸುಳ್ಯ: ಭಾರೀ‌ಮಳೆಗೆ ಪಯಸ್ವಿನಿ ನದಿ ಉಕ್ಕಿ ಹರಿದಿದ್ದು, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಭಾರೀ ಪ್ರವಾಹ ಉಂಟಾಗಿದೆ.

ಸುಳ್ಯ ತಾಲೂಕಿನ ಕಲ್ಲುಗುಂಡಿ ಪೇಟೆ ರಾತ್ರಿ ನೀರಿನಿಂದ ತುಂಬಿದ್ದು, ಪ್ರವಾಹದಲ್ಲಿ ರಾಷ್ಟ್ರೀಯ ಹೆದ್ದಾರಿ 275 ಮುಳುಗಡೆಯಾಗಿದೆ.

ಹೆದ್ದಾರಿಯಲ್ಲಿ ಬಸ್ಸು, ಗೂಡ್ಸ್ ಆಟೋ, ಕಾರುಗಳು ಮುಳುಗಿ ನಿಂತಿದ್ದು, ನೀರಿನಲ್ಲಿ ಕಾರುಗಳು ತೇಲಾಡಿವೆ.

ಎದೆ ಮಟ್ಟದವರೆಗಿನ ನೀರಿನಲ್ಲಿ ಸಿಲುಕಿ ಜನರು ಪರದಾಡಿದ್ದು, ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಅಂಗಡಿ ಮಳಿಗೆಗಳು ಪ್ರವಾಹದ ನೀರಿನಲ್ಲಿ ಮುಳುಗಿದ್ದು, ಚಿಕನ್ ಸೆಂಟರ್ ಗೆ ನೀರು ನುಗ್ಗಿ ಕೋಳಿಗಳು ಸಾವನ್ನಪ್ಪಿವೆ.

- Advertisement -

Latest News

error: Content is protected !!