- Advertisement -
- Advertisement -
ಉಡುಪಿ:ಲಾಕ್‍ಡೌನ್‍ನಿಂದಾಗಿ ಜನರು ಮನೆಯಿಂದ ಹೊರ ಬರಲೇ ಹೆದರುತ್ತಿದ್ದಾರೆ. ಹಾಗೆಯೆ ಈ ಟೈಮ್‍ನಲ್ಲಿ ನಾನ್‍ವೆಜ್ ಪ್ರಿಯರ ಪಾಡು ಕೇಳುವುದೇ ಬೇಡ. ಅದರಲ್ಲೂ ಮೀನಿನೂಟ ಇಲ್ಲದೇ ಬಹುತೇಕ ಕರಾವಳಿಯವರಿಗೆ ಊಟವೇ ಸೇರುವುದಿಲ್ಲ. ಈಗ ಲಾಕ್‍ಡೌನ್ ಎಫೆಕ್ಟ್ ಇರುವ ಹಿನ್ನೆಲೆಯಲ್ಲಿ ಮೀನು ಸರಿಯಾಗಿ ಸಿಗುತ್ತಿಲ್ಲ.
ಆದರೆ ಮೀನು ಸಿಗುವ ಉಡುಪಿಯ ಮೀನಿನಂಗಡಿಯಲ್ಲಂತೂ ಕಿಲೋ ಮೀಟರ್‌ಗಟ್ಟಲೇ ಉದ್ದದ ಕ್ಯೂ ಇರುತ್ತದೆ. ಹೆಬ್ರಿ ಮುದ್ರಾಡಿಯ ಮೀನಿನಂಗಡಿಯಲ್ಲಿ ಪ್ರತಿನಿತ್ಯವೂ ಜನ ಮೀನುಕೊಳ್ಳಲು ಸೋಷಿಯಲ್ ಡಿಸ್ಟೆನ್ಸ್‌ನಲ್ಲಿ ಕಿಲೋ ಮೀಟರ್‌ಗಟ್ಟಲೇ ಕ್ಯೂ ನಿಲ್ಲುತ್ತಾರೆ. ಮೀನು ಬಂದ ಒಂದು ಗಂಟೆಯೊಳಗೆ ಖಾಲಿ ಖಾಲಿಯಾಗುತ್ತದೆ.
ಮೀನಿನಂಗಡಿ ತೆರೆಯುವ ಮುನ್ನವೇ ಗಂಟೆಗಟ್ಟಲೆ ಜನ ಕ್ಯೂನಲ್ಲಿ ಕಾದುನಿಲ್ಲುವ ದೃಶ್ಯ ಸಾಮಾನ್ಯವಾಗಿದೆ. ಡಿಮ್ಯಾಂಡ್‍ಗೆ ತಕ್ಕಂತೆ ರೇಟ್ ಕೂಡ ಕೊಂಚ ಜಾಸ್ತಿಯಾಗಿದೆ.
- Advertisement -