Tuesday, May 7, 2024
Homeತಾಜಾ ಸುದ್ದಿಕತ್ತೆ ಮಾಂಸ ಸೇವನೆಯಿಂದ ಹೆಚ್ಚುತ್ತಂತೆ ಲೈಂಗಿಕ ಶಕ್ತಿ: ಆಂಧ್ರದಲ್ಲಿ ಕತ್ತೆ ಮಾಂಸಕ್ಕೆ ಡಿಮ್ಯಾಂಡೋ ಡಿಮ್ಯಾಂಡ್

ಕತ್ತೆ ಮಾಂಸ ಸೇವನೆಯಿಂದ ಹೆಚ್ಚುತ್ತಂತೆ ಲೈಂಗಿಕ ಶಕ್ತಿ: ಆಂಧ್ರದಲ್ಲಿ ಕತ್ತೆ ಮಾಂಸಕ್ಕೆ ಡಿಮ್ಯಾಂಡೋ ಡಿಮ್ಯಾಂಡ್

spot_img
- Advertisement -
- Advertisement -

ತೆಲಂಗಾಣ: ಕತ್ತೆ ಮಾಂಸ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚಾಗುತ್ತೆ ಅನ್ನೋ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ. ಹಾಗಾಗಿ  ಆಂಧ್ರಪ್ರದೇಶದಲ್ಲಿ ಕತ್ತೆ ಮಾಂಸಕ್ಕೆ ಭರ್ಜರಿ ಬೇಡಿಕೆ ಬಂದಿದೆ ಅಂತೆ.

ಹೌದು… ಆಂಧ್ರಪ್ರದೇಶದ ಪ್ರಕಾಶಂ, ಕೃಷ್ಣಾ, ಪಶ್ಚಿಮ ಗೋದಾವರಿ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಕತ್ತೆ ಮಾಂಸ ತಿನ್ನುವವರ ಸಂಖ್ಯೆ ಹೆಚ್ಚಾಗಿದ್ದು, ಸಹಜವಾಗಿ ಮಾರಾಟವೂ ಅಧಿಕಗೊಂಡಿದೆ. ಇನ್ನೊಂದೆಡೆ ಸ್ಥಳೀಯ ಆಡಳಿತಗಳು ಕತ್ತೆ ಹತ್ಯೆಯನ್ನು ತಡೆಯಲು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇವೆ.

ಕತ್ತೆ ಮಾಂಸಕ್ಕೆ ಬೇಡಿಕೆ ಹೆಚ್ಚಾಗಿದ್ದರಿಂದ ಕತ್ತೆಗಳ ಸಂಖ್ಯೆ ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಅಷ್ಟೇ ಅಲ್ಲ ಪ್ರಾಣಿ ಪ್ರಿಯರೂ ಸಿಟ್ಟಾಗಿದ್ದಾರೆ. ಇನ್ನು ಆಂಧ್ರದ ಜನರು ಕತ್ತೆ ಮಾಂಸದ ಹಿಂದೆ ಬೀಳಲು ಮೂರ್ನಾಲ್ಕು ಕಾರಣಗಳಿವೆ. ಅದರಲ್ಲಿ ಮುಖ್ಯವಾಗಿ ಈ ಮಾಂಸ ಸೇವನೆ ಉಸಿರಾಟದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಅಂದರೆ ಅಸ್ತಮಾ ಸೇರಿ ಮತ್ತಿತರ ಕಾಯಿಲೆಗಳಿಗೆ ಮದ್ದು ಎಂಬುದು ಅವರ ಬಲವಾದ ನಂಬಿಕೆ.

ಅಷ್ಟೇ ಅಲ್ಲ ಇದು ಕಾಮೋತ್ತೇಜಕವಾಗಿದ್ದು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯಾರಲ್ಲಿ ಲೈಂಗಿಕ ನಿರಾಸಕ್ತಿ ಇರುತ್ತದೆಯೋ ಅವರು ಇದನ್ನು ತಿನ್ನಬೇಕು ಎಂದೂ ಅವರು ಹೇಳುತ್ತಾರೆ. ಹೀಗೆ ಕತ್ತೆಯ ಮಾಂಸವನ್ನು ತಿನ್ನುವ ಅಭ್ಯಾಸ ಮೊದಲು ಶುರುವಾಗಿದ್ದು ಪ್ರಕಾಶಂ ಜಿಲ್ಲೆಯ ಸ್ಟುವರ್ಟ್​ಪುರಂ ಎಂಬಲ್ಲಿ ಎಂದು ಆಂಧ್ರದ ಪ್ರಾಣಿಹಕ್ಕು ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ. ಇದೀಗ ಕತ್ತೆ ಮಾಂಸಕ್ಕೆ ಕಿಲೋಗೆ 600 ರೂ.ಇದ್ದು, ತುಂಬ ಚೆನ್ನಾಗಿ ಬೆಳೆದ ಕತ್ತೆಯ ಮಾಂಸ 15 ಸಾವಿರದಿಂದ 20,000ರೂ.ವರೆಗೂ ಮಾರಾಟವಾಗುತ್ತಿದೆ.

- Advertisement -
spot_img

Latest News

error: Content is protected !!