Wednesday, July 15, 2026
Homeತಾಜಾ ಸುದ್ದಿಚಿತ್ರದುರ್ಗ : ಜೈಲಿನಲ್ಲಿ ಮುರುಘಾ ಶ್ರೀಗಳಿಗೆ ಕಾಣಿಸಿಕೊಂಡ ಹೃದಯ ಸಮಸ್ಯೆ; ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು

ಚಿತ್ರದುರ್ಗ : ಜೈಲಿನಲ್ಲಿ ಮುರುಘಾ ಶ್ರೀಗಳಿಗೆ ಕಾಣಿಸಿಕೊಂಡ ಹೃದಯ ಸಮಸ್ಯೆ; ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು

- Advertisement -
- Advertisement -

ಚಿತ್ರದುರ್ಗ : ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳ  ಜಾಮೀನು ಅರ್ಜಿ ವಿಚಾರಣೆಯನ್ನು ಸೆ.23 ಕ್ಕೆ ನ್ಯಾಯಾಲಯ ಮುಂದೂಡಿದ ಬೆನ್ನಲ್ಲೇ ಮುರುಘಾ ಶ್ರೀಗಳಿಗೆ ಹೃದಯದ ಸಮಸ್ಯೆ ಕಾಣಿಸಿಕೊಂಡಿದೆ.  

ಸ್ವಾಮೀಜಿಗೆ ಹೃದಯ ಸಮಸ್ಯೆ ಎದುರಾದ ಹಿನ್ನೆಲೆ, ಶ್ರೀಗಳ ಪರ ವಕೀಲರ ಮನವಿ ಮೇರೆಗೆ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕೋರ್ಟ್ ಸೂಚನೆ ನೀಡಿದೆ.

ಕೊರೋನರಿ ಆಂಜಿಯೋಗ್ರಾಂಗೆ ಶ್ರೀಗಳ ಪರ ವಕೀಲರು ಮನವಿ ಮಾಡಿದ ಹಿನ್ನೆಲೆ ಚಿತ್ರದುರ್ಗ ಜಿಲ್ಲಾ ಕಾರಾಗೃಹದಿಂದ ಪೊಲೀಸ್ ವ್ಯಾನ್ ನಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಶ್ರೀಗಳನ್ನು ಕರೆದುಕೊಂಡು ಹೋಗಲಾಗಿದೆ ಎನ್ನಲಾಗಿದೆ.

- Advertisement -

Latest News

error: Content is protected !!