Friday, June 5, 2026
Homeತಾಜಾ ಸುದ್ದಿಪ್ರಧಾನಿ ಮೋದಿಯಿಂದ ನನಗೆ 'ಸಿಎಂ ಆಗೋ ಆಫರ್‌ 'ಬಂದಿತ್ತು: ಹೆಚ್.ಡಿ.ಕೆ ಯಿಂದ ಹೊಸ ಬಾಂಬ್

ಪ್ರಧಾನಿ ಮೋದಿಯಿಂದ ನನಗೆ ‘ಸಿಎಂ ಆಗೋ ಆಫರ್‌ ‘ಬಂದಿತ್ತು: ಹೆಚ್.ಡಿ.ಕೆ ಯಿಂದ ಹೊಸ ಬಾಂಬ್

- Advertisement -
- Advertisement -

ತುಮಕೂರು: ಬಿಜೆಪಿಯವರು ನನ್ನನ್ನು ಸಿಎಂ ಮಾಡಲು ಮುಂದಾಗಿದ್ದರು ಎಂದು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಶಿರಾದಲ್ಲಿ ನಡೆದ ಜೆಡಿಎಸ್​ ಸಭೆಯಲ್ಲಿ ಮಾತನಾಡಿದ ಎಚ್​ಡಿಕೆ, ‘ಕೇಂದ್ರದಿಂದ ನರೇಂದ್ರ ಮೋದಿ ಅವರೇ ಆಫರ್ ಮಾಡಿದ್ದರು. ಐದು ವರ್ಷ ನಿನ್ನನ್ನು ಯಾರೂ ಟಚ್ ಮಾಡಲ್ಲ ಅಂದಿದ್ದರು. ಕಾಂಗ್ರೆಸ್​ನವರ ಸಂಕುಚಿತ ಮನೋಭಾವದಿಂದ ರಾಜ್ಯದಲ್ಲಿ ದರಿದ್ರ ಸರ್ಕಾರ ಬಂದಿದೆ. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ರಾಹುಲ್ ಗಾಂಧಿಯಿಂದಲೇ ಹಾಸನದಲ್ಲಿ ಭಾಷಣ ಮಾಡಿಸಿದ್ದರು’ ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದರು.

ಕಳೆದ ವಿಧಾನಸಭೆ ಫಲಿತಾಂಶ ನೋಡಿ ರಾಜಕೀಯದಿಂದ ನಾನು ನಿರ್ಗಮಿಸಬೇಕು ಅಂದುಕೊಂಡೆ. ದೇವೇಗೌಡರು.. ಕುಮಾರಸ್ವಾಮಿ ಆರೋಗ್ಯ ಸರಿ ಇಲ್ಲ. ನಿಮ್ಮಲ್ಲಿ ಯಾರಿಗಾದರೂ ಮುಖ್ಯಮಂತ್ರಿ ಮಾಡಿ ಅಂತಾ ಕಾಂಗ್ರೆಸ್​ಗೆ ಹೇಳಿದರು. ಎಷ್ಟೇ ಹೇಳಿದ್ರೂ ಕೇಳದೇ ನನಗೆ ಕಾಂಗ್ರೆಸ್​ನವರು ಮುಖ್ಯಮಂತ್ರಿ ಪಟ್ಟ ಕಟ್ಟಿದ್ರು. ನನಗೆ ಮುಖ್ಯಮಂತ್ರಿ ಆಗುವ ಆಸೆ ಇರಲಿಲ್ಲ. ಬಿಜೆಪಿ ಅವರೂ ನನ್ನನ್ನು ಮುಖ್ಯಮಂತ್ರಿ ಮಾಡಲು ಮುಂದಾಗಿದ್ರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಸಿದ್ದರಾಮಯ್ಯ ಆಡಳಿತದಲ್ಲಿದ್ದಾಗ ತೆಗೆದುಕೊಂಡ ಕೆಲ ತಪ್ಪು ನಿರ್ಧಾರದಿಂದ ಬಡವರಿಗೆ ಮನೆ ಕಟ್ಟಿಕೊಡಲು ಇದುವರೆಗೂ ಆಗಿಲ್ಲ. ಶಿರಾ ಜನರು ನನಗೆ ವಿಷ ಕೊಡ್ತಿರೋ ಹಾಲು ಕೊಡ್ತಿರೋ ನಿಮಗೆ ಬಿಟ್ಟಿದ್ದು. ಇಲ್ಲಿಂದ ಹೊಸ ರಾಜಕೀಯ ಆರಂಭವಾಗಬೇಕು. ಸರ್ಕಾರದಲ್ಲಿ ದುಡ್ಡಿಗೆ ತೊಂದರೆ ಇಲ್ಲ, ರಾಜ್ಯ ಸಂಪದ್ಭರಿತವಾಗಿದೆ. ಶಿರಾದ ಜನತೆ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಬೇಕು ಅಂತಾ ಭಾವುಕರಾಗಿ ನುಡಿದ್ರು.

- Advertisement -

Latest News

error: Content is protected !!