Saturday, June 6, 2026
Homeಕರಾವಳಿಬೆಳ್ತಂಗಡಿ: ಮಿನಿ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೇಂದ್ರ ಸಚಿವರಿಗೆ ಹರೀಶ್ ಪೂಂಜರಿಂದ ಮನವಿ

ಬೆಳ್ತಂಗಡಿ: ಮಿನಿ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೇಂದ್ರ ಸಚಿವರಿಗೆ ಹರೀಶ್ ಪೂಂಜರಿಂದ ಮನವಿ

- Advertisement -
- Advertisement -

ಬೆಳ್ತಂಗಡಿ: ಪ್ರಸಿದ್ಧ ಯಾತ್ರಾ ಕ್ಷೇತ್ರಗಳನ್ನು ಹೊಂದಿರುವ ಪ್ರವಾಸ ಕೇಂದ್ರವಾಗಿ ಬೆಳೆಯುತ್ತಿರುವ ಬೆಳ್ತಂಗಡಿಗೆ ಮಿನಿ ವಿಮಾನ ನಿಲ್ದಾಣ ನಿರ್ಮಿಸುವಂತೆ ಕೇಂದ್ರ ಸರಕಾರಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಅವರು ಮನವಿ ಸಲ್ಲಿಸಿದ್ದಾರೆ.


ಮನವಿಯನ್ನು ಕೇಂದ್ರ ಸರ್ಕಾರ ಸಚಿವ ರಾಜನಾಥ್ ಸಿಂಗ್ ಅವರಿಗೆ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ನೀಡದ್ದಾರೆ. ಈ ಮೂಲಕ ಬೆಳ್ತಂಗಡಿ ಜನತೆಗೂ ವಿಮಾನದ ನಂಟು ಬೆಳೆಯುವ ಕಾಲ ಸನ್ನಿಹಿತವಾಗಲಿದೆ. ಬೆಳ್ತಂಗಡಿ ತಾಲೂಕಿಗೆ ನಿತ್ಯ ಗಣ್ಯಾದಿ ಗಣ್ಯರು ಭೇಟಿ ನೀಡುತ್ತಿರುತ್ತಾರೆ.

ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಂಡರೆ ಭೇಟಿ ನೀಡುವ ಜನತೆಗೂ ಸಹಕಾರಿಯಾಗಲಿದೆ ಜತೆಗೆ ತಾಲೂಕಿನ ಅಭಿವೃದ್ಧಿಗೂ ಪೂರಕ ವಾತಾವರಣ ನಿರ್ಮಾಣವಾಗುವ ನಿರೀಕ್ಷೆ ಜನತೆಯದ್ದು.

- Advertisement -

Latest News

error: Content is protected !!