Thursday, July 16, 2026
Homeಕರಾವಳಿಉಡುಪಿಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಟ ವಸಿಷ್ಠ ಸಿಂಹ ಹಾಗೂ...

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ

- Advertisement -
- Advertisement -

ಉಡುಪಿ; ನಟಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ತಮ್ಮ ಪ್ರೀತಿಗೆ ನಿಶ್ಚಿತಾರ್ಥದ ಮುದ್ರೆ ಒತ್ತಿದ ಬೆನ್ನಲ್ಲೇ ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಬಳಿಕ ಕಾಣಿಯೂರು ಮಠಾಧೀಶರಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು.
ಕೃಷ್ಣ ಮಠದ ಕನಕ ನವಗ್ರಹ ಕಿಂಡಿ ಮೂಲಕ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ್ದರು.ಬಳಿಕ ಕೃಷ್ಣ ಮಠದ ರಥಬೀದಿಯಲ್ಲಿ ಇರುವ ಕಾಣಿಯೂರು ಮಠಕ್ಕೆ ಭೇಟಿ ನೀಡಿ, ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆಯನ್ನು ಸ್ವೀಕರಿಸಿದರು. ಈ ವೇಳೆ ಕಾಣಿಯೂರು ಶ್ರೀಗಳು ನವ ಜೋಡಿಯನ್ನು ಮಠದ ವತಿಯಿಂದ ಗೌರವ ಸಲ್ಲಿಸಿದರು.

- Advertisement -

Latest News

error: Content is protected !!