Wednesday, May 1, 2024
Homeಕರಾವಳಿಲೋಕಾಯುಕ್ತ ಪೊಲೀಸರಿಂದ ಜಿಲ್ಲೆಯ ಮೂರು ತಾಲೂಕಿನಲ್ಲಿ ಮರಳು ಅಡ್ಡೆಗಳ ಮೇಲೆ ದಾಳಿ; ಲೋಕಾಯಕ್ತ ಪೊಲೀಸರಿಂದ ಪತ್ರಿಕಾ...

ಲೋಕಾಯುಕ್ತ ಪೊಲೀಸರಿಂದ ಜಿಲ್ಲೆಯ ಮೂರು ತಾಲೂಕಿನಲ್ಲಿ ಮರಳು ಅಡ್ಡೆಗಳ ಮೇಲೆ ದಾಳಿ; ಲೋಕಾಯಕ್ತ ಪೊಲೀಸರಿಂದ ಪತ್ರಿಕಾ ಪ್ರಕಟಣೆ ಬಿಡುಗಡೆ

spot_img
- Advertisement -
- Advertisement -

ಮಂಗಳೂರು : ಅಕ್ರಮ ಮರಳು ದಂಧೆಕೋರರ ಜೊತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಣ ಪಡೆದು ಶಾಮಿಲಾಗಿದ್ದಾರೆ ಎಂಬ ದೂರು ಮಂಗಳೂರು ಲೋಕಾಯುಕ್ತ ಇಲಾಖೆಗೆ ಬಂದ  ಮೇರೆಗೆ ಲೋಕಾಯುಕ್ತ ಪೊಲೀಸರ ತಂಡ ಗುರುವಾರ ಬೆಳಗ್ಗಿನ ಜಾವ ಜಿಲ್ಲೆಯ ಮೂರು ತಾಲೂಕಿನಲ್ಲಿ ದಾಳಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು , ಮೂಡಬಿದಿರೆ ತಾಲೂಕು , ಬೆಳ್ತಂಗಡಿ ತಾಲೂಕಿನಲ್ಲಿ ಮೂರು ತಂಡಗಳಾಗಿ ದಾಳಿದ್ದು ಈ ವೇಳೆ ಟಿಪ್ಪರ್, ದೋಣೆ ಸಹಿತ ವಶಪಡಿಸಿಕೊಂಡು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಬಂಟ್ವಾಳ ತಾಲೂಕಿನ ತುಂಬೆ ಸೇರಿದಂತೆ ವಿವಿಧ ಕಡೆ ಲೋಕಾಯುಕ್ತ ಇನ್ಸ್ಪೆಕ್ಟರ್ ಅಮಾನುಲ್ಲಾ ಮತ್ತು ತಂಡ ದಾಳಿ ಮಾಡಿದ್ದು ಈ ವೇಳೆ ಒಂದು ಮರಳು ತೆಗೆಯುತ್ತಿದ್ದ ದೋಣಿಯನ್ನು ವಶಕ್ಕೆ ಪಡೆದು ಬಂಟ್ವಾಳ ಪೊಲೀಸರಿಗೆ ಹಸ್ತಾಂತರ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ, ಪುದುವೆಟ್ಟು, ಕಕ್ಕಿಂಜೆ , ಮುಂಡಾಜೆ ,ವೇಣೂರು ಕಡೆಗಳಲ್ಲಿ ಲೋಕಾಯಕ್ತ ಡಿವೈಎಸ್ಪಿ ಚೆಲುವರಾಜ್ ಮತ್ತು ತಂಡ ದಾಳಿ ಮಾಡಿದ್ದು ಈ ವೇಳೆ ಧರ್ಮಸ್ಥಳ ಗ್ರಾಮದ ನೇತ್ರಾವತಿ ಬಳಿಯ ಹೊಳೆ ಬದಿ ಮರಳು ದಂಧೆ ನಡೆಸುತ್ತಿದ್ದಾಗ ಮರಳು ತುಂಬಿದ್ದ KA-19-AA-2726 ಮತ್ತು KA-21-C-1305 ನಂಬರಿನ ಎರಡು ಟಿಪ್ಪರ್ ವಾಹನ ಮತ್ತು ಒಂದು ದೋಣೆ ವಶಕ್ಕೆ ಪಡೆದಿದ್ದು ಇದರ ಒಟ್ಟು ಮೌಲ್ಯ 8,08,000/- ಆಗಿದೆ. ಧರ್ಮಸ್ಥಳ ಪೊಲೀಸರಿಗೆ ಲೋಕಾಯುಕ್ತ ಪೊಲೀಸರು ಹಸ್ತಾಂತರ ಮಾಡಿದ್ದಾರೆ.

ಮೂಡಬಿದಿರೆ ತಾಲೂಕಿನ ಎಡಪದವು , ಕೈಕಂಬ , ಅಡ್ಯಾರು ಸೇರಿದಂತೆ ವಿವಿಧೆಡೆ ಲೋಕಾಯಕ್ತ ಡಿವೈಎಸ್ಪಿ ಕಲಾವತಿ ಮತ್ತು ತಂಡ ದಾಳಿ ಮಾಡಿದ್ದಾರೆ.ಅಕ್ರಮ ಮರಳುಗಾರಿಕೆ ದಾಳಿ ವೇಳೆ ಒಟ್ಟು 40 ಲಕ್ಷ ಮೌಲ್ಯದ ಸುತ್ತುಗಳನ್ನು ವಶಪಡಿಸಿಕೊಂಡು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿದ್ದು ,ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ. ಅಕ್ರಮ ಮರಳುಗಾರಿಕೆಯಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದ್ದು ಸದ್ರಿ ವಿಚಾರದಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯತನದ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಲೋಕಾಯಕ್ತ ಎಸ್ಪಿ ಲಕ್ಷ್ಮೀ ಗಣೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಾಯಕ್ತ ದಾಳಿ ವಿಚಾರ ತಿಳಿದು ಹಲವು ಕಡೆಗಳಲ್ಲಿ ಮರಳು ದಂಧೆಕೊರರು ಅಲರ್ಟ್ ಅಗಿ ಮರಳು ,ಟಿಪ್ಪರ್ ಸಮೇತ ದೋಣಿಗಳನ್ನು ಖಾಲಿ ಮಾಡಿ ಪರಾರಿಯಾಗಿದ್ದು ಅಂತಹ ಅಡ್ಡೆಗಳ ಮೇಲೆ ನಿಗಾ ಇಡಲಾಗುವುದು. ಮುಂದೆ ಮರಳುಗಾರಿಕೆ ಬಗ್ಗೆ ಮಾಹಿತಿ ಬಂದ್ರೆ ಮುಲಾಜಿಲ್ಲದೆ ದಾಳಿ ಮಾಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಲೋಕಾಯುಕ್ತ ಎಸ್ಪಿ ಲಕ್ಷ್ಮೀ ಗಣೀಶ್ ನಿರ್ದೇಶನದಲ್ಲಿ ಡಿವೈಎಸ್ಪಿ ಕಲಾವತಿ, ಡಿವೈಎಸ್ಪಿ ಚೆಲುವರಾಜ್, ಇನ್ಸ್ಪೆಕ್ಟರ್ ಅಮನುಲ್ಲಾ ಮತ್ತು ಸಿಬ್ಬಂದಿ ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

- Advertisement -
spot_img

Latest News

error: Content is protected !!