- Advertisement -
- Advertisement -
ಮಂಗಳೂರು: ದಿನ ನಿತ್ಯ ನಡೆಯುವ ಕೆಲವೊಂದು ಘಟನೆಗಳು, ಹಾಸ್ಯದ ಸನ್ನಿವೇಶಗಳು ಯಕ್ಷಗಾನದ ಪ್ರಸಂಗದಲ್ಲಿ ಹಾಸ್ಯದ ರೂಪದಲ್ಲಿ ಪ್ರದರ್ಶನವಾಗುವುದು ಹೊಸದೇನಲ್ಲ. ಇದೀಗ ಮಂಗಳೂರಿನಲ್ಲಿ ಈಚೆಗೆ ನಡೆದ ಕುಕ್ಕರ್ ಸ್ಫೋಟ ಪ್ರಕರಣವು ಯಕ್ಷಗಾನದಲ್ಲಿಯೂ ಪ್ರತಿಧ್ವನಿಸಿದ್ದು, ಈ ಹಾಸ್ಯ ಸನ್ನಿವೇಶದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಮೂಲ್ಕಿಯ ಬಪ್ಪನಾಡು ಯಕ್ಷಗಾನ ಮಂಡಳಿ ಮೇಳದ ‘ಭಂಡಾರ ಚಾವಡಿ’ ಪ್ರಸಂಗದಲ್ಲಿ ಈ ದೃಶ್ಯವನ್ನು ಸೇರಿಸಲಾಗಿದೆ.
ರಾಜ (ನಂದಿಕೂರು ರಾಮಕೃಷ್ಣ)ನ ಆಸ್ಥಾನಕ್ಕೆ ಬರುವ ಕಲಾವಿದ (ಕೊಡಪದವು ದಿನೇಶ್ ಶೆಟ್ಟಿಗಾರ್), ‘ತನಗೆಲ್ಲೂ ಮನೆಯನ್ನು ನೀಡುತ್ತಿಲ್ಲ. ತನ್ನ ಹತ್ತಿರದ ಚೀಲದಲ್ಲಿನ ವಸ್ತುಗಳನ್ನು ನೋಡಿ ಬೆಚ್ಚಿ ಬೀಳುತ್ತಿದ್ದಾರೆ’ ಎಂದು ತನ್ನಲ್ಲಿದ್ದ ಗೋಣೀಚೀಲದಲ್ಲಿನ ಬಟ್ಟೆಗಳನ್ನು ತೆಗೆಯುತ್ತಾ… ಕೊನೆಗೆ ಸಣ್ಣ ಕುಕ್ಕರನ್ನು ತೆಗೆದಾಗ ರಾಜ ಹೆದರಿ ಓಡುವ ದೃಶ್ಯ ಈ ಸನ್ನಿವೇಶದಲ್ಲಿದೆ. ಈ ದೃಶ್ಯವು ಈಗ ಪರ-ವಿರೋಧ ಚರ್ಚೆಗೂ ಕಾರಣವಾಗಿದೆ.
- Advertisement -