Friday, June 5, 2026
Homeಚಿಕ್ಕಮಗಳೂರುಮಲೆನಾಡಿನಲ್ಲಿ ಕಾವು ಪಡೆದುಕೊಂಡ ಹಲಾಲ್ ಬ್ಯಾನ್ ಅಭಿಯಾನ: ಬ್ಯಾನರ್‌ ಮೂಲಕ ವ್ಯಾಪಾರಕ್ಕೆ ಬಾರದಂತೆ ಮುಸ್ಲಿಂರಿಗೆ ಸೂಚನೆ

ಮಲೆನಾಡಿನಲ್ಲಿ ಕಾವು ಪಡೆದುಕೊಂಡ ಹಲಾಲ್ ಬ್ಯಾನ್ ಅಭಿಯಾನ: ಬ್ಯಾನರ್‌ ಮೂಲಕ ವ್ಯಾಪಾರಕ್ಕೆ ಬಾರದಂತೆ ಮುಸ್ಲಿಂರಿಗೆ ಸೂಚನೆ

- Advertisement -
- Advertisement -

ಚಿಕ್ಕಮಗಳೂರು : ಹಿಜಾಬ್‌ ವಿವಾದದ ಬೆನ್ನಲ್ಲೇ ಹುಟ್ಟಿಕೊಂಡ ವ್ಯಾಪಾರದ ಸಂಘರ್ಷ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.  ಮಲೆನಾಡಿನಲ್ಲಿ ಮುಸ್ಲಿಂ ವರ್ತಕರಿಗೆ ನಿರ್ಬಂಧದ ಕೂಗು ಜೋರಾಗಿಯೇ ಕೇಳಿ ಬರ್ತಿದೆ. ಇದರ ನಡುವೆಯೇ ಈಗ ಹಲಾಲ್‌ ಬ್ಯಾನ್‌ ಅಭಿಯಾನವೂ ಶುರುವಾಗಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ ಸೇರಿದಂತೆ ಚಿಕ್ಕಮಗಳೂರಿನ‌ ಕೆಲ ಭಾಗಗಲ್ಲಿ ಈಗಾಗಲೇ ‌ನಡೆಯುವ ಜಾತ್ರೆ, ಸುಗ್ಗಿ ಹಬ್ಬಗಳಲ್ಲಿ ಬ್ಯಾನರ್ ಗಳನ್ನು‌  ಹಾಕಿ ಮುಸ್ಲಿಂ ನ ವ್ಯಾಪಾರಸ್ಥರಿಗೆ ಅವಕಾಶವಿಲ್ಲಂದು ಸಾರಿದ್ದಾರೆ.

ಇದರ‌ ನಡುವೆ ಚಿಕ್ಕಮಗಳೂರು ತಾಲ್ಲೂಕಿನ ಹುಯಿಗೆರೆ ಗ್ರಾಮದಲ್ಲಿ ನಡೆಯುತ್ತಿರುವ ನೇಮೋತ್ಸವದಲ್ಲೂ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಲಾಗಿದೆ. ಸಾವಿರಾರು ಜನರು ಸೇರುವಂತಹ ಉತ್ಸವದಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ಪ್ರತಿವರ್ಷವೂ ಕೂಡ ಇಲ್ಲಿ ಭರ್ಜರಿ ವ್ಯಾಪಾರವಾಗುತ್ತಿತ್ತು. ಆದರೆ ಈ ಬಾರಿ ನಿರ್ಬಂಧ ಹೇರಿರುವ ಪರಿಣಾಮ ಮುಸ್ಲಿಂ ವ್ಯಾಪಾರಸ್ಥರು ಅಂಗಡಿ ಮಳಿಗೆಗಳನ್ನು ಹಾಕಿಕೊಳ್ಳುವುದಕ್ಕೆ ಅವಕಾಶವೇ ಆಗಿಲ್ಲ. ಶ್ರೀ ಚೌಡೇಶ್ವರಿ ನೇಮೋತ್ಸವವೂ ಇದೇ ತಿಂಗಳು ಮಾರ್ಚ್ 24ರಿಂದ ಶುರುವಾಗಿದೆ. ಇಂದು ರಾತ್ರಿವರೆಗೂ ನಡೆಯಲಿರುವ ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸುತ್ತಾರೆ. ,ಗ್ರಾಮದ ಮುಂಭಾಗದಲ್ಲಿ‌ ಬ್ಯಾನರ್ ಹಾಕಿ ವ್ಯಾಪಾರಕ್ಕೆ ಬರದಂತೆ ಅನ್ಯಧರ್ಮದ ವ್ಯಾಪಾರಸ್ಥರಿಗೆ ಸೂಚನೆ ನೀಡಲಾಗಿದೆ. ಇದು ಮುಸ್ಲಿಂ ವರ್ತಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

- Advertisement -

Latest News

error: Content is protected !!