Friday, July 17, 2026
Homeಕರಾವಳಿಉಡುಪಿಮೂಡುಬಿದಿರೆ: ಬಂಟ ಸಮುದಾಯಕ್ಕೆ ಗುರು ಪೀಠ ಬೇಡ: ದೇವರು ಮತ್ತು ಅರಿವೇ ಗುರು : ಕೇಮಾರು...

ಮೂಡುಬಿದಿರೆ: ಬಂಟ ಸಮುದಾಯಕ್ಕೆ ಗುರು ಪೀಠ ಬೇಡ: ದೇವರು ಮತ್ತು ಅರಿವೇ ಗುರು : ಕೇಮಾರು ಶ್ರೀ

- Advertisement -
- Advertisement -

ಮೂಡುಬಿದಿರೆ: ಬಂಟ ಸಮುದಾಯಕ್ಕೆ ಗುರುಪೀಠದ ಬೇಡ. ದೇವರು ಮತ್ತು ಅರಿವೇ ಗುರು. ಸಮುದಾಯದ ಹಿರಿಯರು ಗುರುಪೀಠಕ್ಕೆ ಪ್ರಾಧಾನ್ಯತೆ ಕೊಡದೇ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದಕ್ಕೆ ಇಂದು ಸಮುದಾಯ ಅಭಿವೃದ್ಧಿ ಸಾಧ್ಯವಾಗಿದೆ. ಹಾಗಾಗಿ ಮುಂದೆಯೂ ಸಮುದಾಯದವರು ಹಿರಿಯರ ದಾರಿಯಲ್ಲೇ ಸಾಗಬೇಕು. ಎಂದು ಕೇಮಾರು ಸಾಂದೀಪನೀ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿಯವರು ಹೇಳಿದರು.

ಮೂಡುಬಿದಿರೆ ಯುವ ಬಂಟರ ಸಂಘದ ವತಿಯಿಂದ ನಡೆದ ಬಂಟರ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ  ಸ್ವಾಮೀಜಿ ಆಶೀರ್ವಚನ ನೀಡಿದ್ರು. ಆಶೀರ್ವಚನ ನೀಡಿದ ಸ್ವಾಮೀಜಿಯವರು ಸಂಸ್ಕೃತಿ, ಶಿಕ್ಷಣ, ಉದ್ಯಮ, ಎಲ್ಲಾ ಕ್ಷೇತ್ರಗಳಲ್ಲೂ ಕೊಡುಗೆ ನೀಡಿದ ಬಂಟ ಸಮುದಾಯದ ಹೆಮ್ಮೆ ಎಂದರು.

ನ್ಯಾಯವಾದಿಗಳಾದ ಚೇತನ್ ಕುಮಾರ್ ಶೆಟ್ಟಿ, ನಾಗೇಶ್ ಶೆಟ್ಟಿ, ಉದ್ಯಮಿ ತೋಡಾರು ದಿವಾಕರ ಶೆಟ್ಟಿ ,ಸುಕೇಶ್ ಶೆಟ್ಟಿ ಶಿರ್ತಾಡಿ, ಪ್ರೇಮನಾಥ ಮಾರ್ಲ, ಮಿಥುನ್ ಶೆಟ್ಟಿ ನ್ಯೂ ಪಡಿವಾಳ್ಸ್, ವಂದನಾ ರೈ ಕಾರ್ಕಳ, ಭೋಜ ಶೆಟ್ಟಿ, ಕುಮಾರ್ ಶೆಟ್ಟಿ ಇರುವೈಲು, ಯುವ ಬಂಟರ ಸಂಘದ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಭರತ್ ಶೆಟ್ಟಿ ಇರುವೈಲು, ಪದಾಧಿಕಾರಿಗಳು ಉಪಸ್ಥಿತರಿದ್ದರು.

- Advertisement -

Latest News

error: Content is protected !!