Thursday, June 4, 2026
Homeತಾಜಾ ಸುದ್ದಿಕೇಂದ್ರ ಸರ್ಕಾರದ ನೂತನ ಸರಕು ಸೇವಾ ತೆರಿಗೆ ವಿರುದ್ಧ ಮೀಮ್ಸ್‌ ಸಮರ

ಕೇಂದ್ರ ಸರ್ಕಾರದ ನೂತನ ಸರಕು ಸೇವಾ ತೆರಿಗೆ ವಿರುದ್ಧ ಮೀಮ್ಸ್‌ ಸಮರ

- Advertisement -
- Advertisement -

ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಇತ್ತೀಚೆಗೆ ನಡೆದಂತಹ ತನ್ನ 47ನೇ ಸಭೆಯಲ್ಲಿ ಅಗತ್ಯ ವಸ್ತುಗಳ ಮೇಲೆ ಹಾಗೂ ಆಹಾರ ಪದಾರ್ಥಗಳ ಮೇಲಿದ್ದ ತೆರಿಗೆ ಹೆಚ್ಚಿಸುವ ನಿರ್ಧಾರವನ್ನು ಕೈಗೊಂಡಿದೆ. ಈ ನೂತನ ತೆರಿಗೆ ಕಾಯ್ದೆಯು ಜುಲೈ 18ರಿಂದ ಜಾರಿಯಾಗಿದೆ. ತೆರಿಗೆ ವ್ಯಾಪ್ತಿಯಿಂದ ಹೊರಗಿದ್ದ ಮೊಸರು, ಮಜ್ಜಿಗೆ, ಲಸ್ಸಿ ಮುಂತಾದ ಆಹಾರ ಪದಾರ್ಥಗಳ ಮೇಲೆ ತೆರಿಗೆ ವಿಧಿಸಿ ಜನಾಕ್ರೋಶಕ್ಕೆ ತುತ್ತಾಗಿದೆ.

ಇನ್ನು ಆರೋಗ್ಯ ಸೇವಾ ಕ್ಷೇತ್ರ ಒದಗಿಸುವ ಆಸ್ಪತ್ರೆಗಳ ಹಾಸಿಗೆಗಳು, ಪ್ರಿಂಟಿಂಗ್ ಇಂಕ್, ಎಲ್ಇಡಿ ದೀಪಗಳ ಮೇಲೂ ಶೇ 5 ರಿಂದ 18 ರವರೆಗೆ ಜಿಎಸ್‌ಟಿ ಹೇರಲಾಗಿದೆ. ರಾಜಕೀಯ ನಾಯಕರು ಸೇರಿದಂತೆ ಜನಸಾಮಾನ್ಯರೂ ಮೀಮ್ ಮೂಲಕ ಕೇಂದ್ರ ಸರ್ಕಾರದ ಈ ಜಿಎಸ್‌ಟಿ ಹೆಚ್ಚಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ತೆರಿಗೆ ಪಾವತಿಸಿದರೂ ಪ್ರಧಾನಿ ಮೋದಿ ಅವರು ಮಧ್ಯಮ ವರ್ಗವನ್ನು ಅನಾರೋಗ್ಯದಲ್ಲೂ ಬಿಡುತ್ತಿಲ್ಲ” ಎಂದು ಕುಮಾರ್ ಸೇವಕ್ ಎಂಬುವವರು ಟೀಕಿಸಿದ್ದಾರೆ. “ನಾನು ನಿಮಗೆ ಸಹಾಯ ಮಾಡುತ್ತಿಲ್ಲ, ನಿಮ್ಮನ್ನು ದೋಚಲು ಪ್ರಯತ್ನಿಸುತ್ತಿದ್ದೇನೆ” ಎಂದು ಹೇಳುವ ಮೀಮ್‌ವೊಂದನ್ನು ಅವರು ಹಂಚಿಕೊಂಡಿದ್ದಾರೆ. ಈ ಎಲ್ಲಾ ಮೀಮ್ ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

- Advertisement -

Latest News

error: Content is protected !!