Wednesday, June 3, 2026
Homeತಾಜಾ ಸುದ್ದಿಬೆಂಗಳೂರಿನಲ್ಲಿ ಶಂಕಿತ ಉಗ್ರ ಸಿಸಿಬಿ ವಶಕ್ಕೆ

ಬೆಂಗಳೂರಿನಲ್ಲಿ ಶಂಕಿತ ಉಗ್ರ ಸಿಸಿಬಿ ವಶಕ್ಕೆ

- Advertisement -
- Advertisement -

ಬೆಂಗಳೂರು:  ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಒಬ್ಬ ಶಂಕಿತ ಉಗ್ರ ಸೇರಿ ನಾಲ್ವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ.

ಅಖ್ತರ್ ಹುಸೇನ್ ಲಷ್ಕರ್ ಶಂಕಿತ ಉಗ್ರನಾಗಿದ್ದು, ಅಸ್ಸಾಂ ಮೂಲದವನು ಎಂದು ಹೇಳಲಾಗಿದೆ.

ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಟಿಪಿ ಏರಿಯಾದ ಕಟ್ಟಡವೊಂದರಲ್ಲಿ ಶಂಕಿತ ಉಗ್ರ ವಾಸವಾಗಿದ್ದು, ಅದೇ ಕೊಠಡಿಯಲ್ಲಿ ಇತರ ಮೂವರು ಯುವಕರು ಕೂಡಾ ಇದ್ದು ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ನಾಲ್ವರು ರಾತ್ರಿ ವೇಳೆ ಮಾತ್ರ ಓಡಾಡುತ್ತಿದ್ದು, ಸ್ಥಳೀಯರೊಂದಿಗೆ ಸಂಪರ್ಕದಲ್ಲಿ ಕೂಡಾ ಇರಲಿಲ್ಲ ಎನ್ನಲಾಗಿದೆ. ಶಂಕಿತ ಉಗ್ರನ ವಾಸ್ತವ್ಯದ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ್ದ ಸಿಸಿಬಿ ಅಧಿಕಾರಿಗಳು ನಿನ್ನೆ ಸಂಜೆ 5 ಗಂಟೆಯಿಂದಲೇ ಮನೆ ಬಳಿ ಕಾದು ಕುಳಿತು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಅಖ್ತರ್ ಹುಸೇನ್ ಮನೆಗೆ ಬಂದಿದ್ದಗ ಸಿಸಿಬಿ ತಂಡ ದಾಳಿ ನಡೆಸಿ ಶಂಕಿತ ಉಗ್ರ ಸೇರಿ ನಾಲ್ವರನ್ನು ವಶಕ್ಕೆ ಪಡೆದಿದೆ.

ಕೆಲವು ತಿಂಗಳ ಹಿಂದೆ ಬೆಂಗಳೂರಿನ ಶ್ರೀರಾಮಪುರ ವ್ಯಾಪ್ತಿಯಲ್ಲಿ ಮಸೀದಿಯಲ್ಲಿ ವಾಸವಾಗಿದ್ದ ಶಂಕಿತ ಉಗ್ರನನ್ನು ವಶಕ್ಕೆ ಪಡೆಯಲಾಗಿತ್ತು.

- Advertisement -

Latest News

error: Content is protected !!