Thursday, October 15, 2026
Homeಪ್ರಮುಖ-ಸುದ್ದಿಬೆಂಗಳೂರು–ಮಂಗಳೂರು ರೈಲು ಮಾರ್ಗದಲ್ಲಿ ಮಹತ್ವದ ಬದಲಾವಣೆ: ಘಾಟ್ ಸೆಕ್ಷನ್‌ನ 7 ರೈಲುಗಳು ಶೀಘ್ರದಲ್ಲೇ ವಿದ್ಯುತ್ ಚಾಲಿತ!

ಬೆಂಗಳೂರು–ಮಂಗಳೂರು ರೈಲು ಮಾರ್ಗದಲ್ಲಿ ಮಹತ್ವದ ಬದಲಾವಣೆ: ಘಾಟ್ ಸೆಕ್ಷನ್‌ನ 7 ರೈಲುಗಳು ಶೀಘ್ರದಲ್ಲೇ ವಿದ್ಯುತ್ ಚಾಲಿತ!

- Advertisement -
- Advertisement -

ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲು ಸಂಚಾರದಲ್ಲಿ ಪ್ರಮುಖ ಬದಲಾವಣೆಯಾಗಲಿದ್ದು, ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ ಉದ್ದದ ಘಾಟ್ ವಿಭಾಗದಲ್ಲಿ ಶೀಘ್ರದಲ್ಲೇ ಸಂಪೂರ್ಣ ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಲು ನೈಋತ್ಯ ರೈಲ್ವೆ ಸಿದ್ಧತೆ ನಡೆಸುತ್ತಿದೆ.

ಈ ಮಾರ್ಗದ ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಂಡು ಸುಮಾರು ಒಂದು ವರ್ಷ ಕಳೆದಿದೆ. ಇದೀಗ ಸಕಲೇಶಪುರದಲ್ಲಿ ಟ್ರ್ಯಾಕ್ಷನ್ ಸಬ್‌ಸ್ಟೇಷನ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅದು ಪೂರ್ಣಗೊಂಡ ಬಳಿಕ ವಿದ್ಯುತ್ ಎಂಜಿನ್‌ಗಳ ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಸಂಬಂಧಿಸಿದ ಪರೀಕ್ಷೆಗಳು ಕಳೆದ ತಿಂಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಈ ಮಾರ್ಗದಲ್ಲಿ ವಿದ್ಯುತ್ ರೈಲುಗಳ ಕಾರ್ಯಾಚರಣೆಗೆ ಅಗತ್ಯ ಸಿದ್ಧತೆಗಳು ಮುಂದುವರಿದಿವೆ.

ಘಾಟ್ ವಿಭಾಗದಲ್ಲಿ ಏಳು ಪ್ರಮುಖ ರೈಲುಗಳನ್ನು ಸಂಪೂರ್ಣ ವಿದ್ಯುತ್ ಚಾಲನೆಗೆ ಬದಲಾಯಿಸಲು ನೈಋತ್ಯ ರೈಲ್ವೆ ಯೋಜಿಸಿದೆ. ಅವುಗಳೆಂದರೆ: ಘಾಟ್ ವಿಭಾಗದಲ್ಲಿ ಏಳು ಪ್ರಮುಖ ರೈಲುಗಳನ್ನು ಸಂಪೂರ್ಣ ವಿದ್ಯುತ್ ಚಾಲನೆಗೆ ಬದಲಾಯಿಸಲು ನೈಋತ್ಯ ರೈಲ್ವೆ ಯೋಜಿಸಿದೆ. ಅವುಗಳೆಂದರೆ: ಎಸ್‌ಎಂವಿಟಿ ಬೆಂಗಳೂರು–ಮುರುಡೇಶ್ವರ ಎಕ್ಸ್‌ಪ್ರೆಸ್, ಕೋಝಿಕ್ಕೋಡ್ ಎಕ್ಸ್‌ಪ್ರೆಸ್, ಯಶವಂತಪುರ–ಕಾರವಾರ ಎಕ್ಸ್‌ಪ್ರೆಸ್, ಯಶವಂತಪುರ–ಮಂಗಳೂರು ಜಂಕ್ಷನ್ ವಾರಸುತಿರಿ ಎಕ್ಸ್‌ಪ್ರೆಸ್, ಗೊಮ್ಮಟೇಶ್ವರ ಎಕ್ಸ್‌ಪ್ರೆಸ್, ವಿಜಯಪುರ–ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್, ಕೆಎಸ್‌ಆರ್ ಬೆಂಗಳೂರು–ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್

ಈ ರೈಲುಗಳ ಪೈಕಿ ಕೆಲವು ಸಂಪೂರ್ಣವಾಗಿ ಡೀಸೆಲ್ ಎಂಜಿನ್‌ಗಳನ್ನು ಬಳಸುತ್ತಿದ್ದರೆ, ಇನ್ನು ಕೆಲವು ಘಾಟ್ ವಿಭಾಗದಲ್ಲಿ ಡೀಸೆಲ್ ಶಕ್ತಿಯನ್ನು ಅವಲಂಬಿಸಿವೆ. ವಿದ್ಯುತ್ ಚಾಲನೆ ಆರಂಭವಾದ ಬಳಿಕ ಈ ರೈಲುಗಳು ಘಾಟ್ ವಿಭಾಗದಲ್ಲೂ ವಿದ್ಯುತ್ ಎಂಜಿನ್‌ಗಳ ಮೂಲಕ ಸಂಚರಿಸಲಿವೆ.

ಇಂಧನ ಉಳಿತಾಯ, ಮಾಲಿನ್ಯ ಕಡಿತಕ್ಕೆ ಸಹಕಾರಿ; ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ನಡುವಿನ ಘಾಟ್ ಮಾರ್ಗವು ಕಡಿದಾದ ಏರುಪೇರುಗಳು, ಸುರಂಗಗಳು ಮತ್ತು ಸೇತುವೆಗಳನ್ನು ಹೊಂದಿರುವುದರಿಂದ ರೈಲು ಸಂಚಾರಕ್ಕೆ ಸವಾಲಿನ ಪ್ರದೇಶವಾಗಿದೆ. ಈ ಹಿಂದೆ ಇಂತಹ ಕಠಿಣ ಹಾದಿಯನ್ನು ದಾಟಲು ಡೀಸೆಲ್ ಎಂಜಿನ್‌ಗಳ ನೆರವು ಅಗತ್ಯವಾಗಿತ್ತು.

ಸಬ್‌ಸ್ಟೇಷನ್ ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕ ಸಂಚಾರ ಯಶಸ್ವಿಯಾದರೆ, ಈ ಮಾರ್ಗದಲ್ಲಿ ಸಂಪೂರ್ಣ ವಿದ್ಯುತ್ ಚಾಲಿತ ರೈಲು ಕಾರ್ಯಾಚರಣೆಗೆ ದಾರಿ ಸುಗಮವಾಗಲಿದೆ. ಇದರಿಂದ ಇಂಧನ ಉಳಿತಾಯವಾಗುವುದರ ಜೊತೆಗೆ ರೈಲು ಸಂಚಾರದ ದಕ್ಷತೆ ಹೆಚ್ಚಿ, ಪರಿಸರ ಮಾಲಿನ್ಯವೂ ಕಡಿಮೆಯಾಗುವ ನಿರೀಕ್ಷೆಯಿದೆ.

- Advertisement -

Latest News

error: Content is protected !!