Friday, June 5, 2026
Homeತಾಜಾ ಸುದ್ದಿಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ; ಮದುವೆಯಾದ ಮರುದಿನವೇ ಪತ್ನಿಯನ್ನು ಟ್ರಾಫಿಕ್ ನಲ್ಲಿ ಬಿಟ್ಟು ವರ ಪರಾರಿ

ಬೆಂಗಳೂರಿನಲ್ಲೊಂದು ವಿಚಿತ್ರ ಘಟನೆ; ಮದುವೆಯಾದ ಮರುದಿನವೇ ಪತ್ನಿಯನ್ನು ಟ್ರಾಫಿಕ್ ನಲ್ಲಿ ಬಿಟ್ಟು ವರ ಪರಾರಿ

- Advertisement -
- Advertisement -

ಬೆಂಗಳೂರು; ಮದುವೆಯಾದ ಮರುದಿನವೇ ಪತ್ನಿಯನ್ನು ಟ್ರಾಫಿಕ್ ನಲ್ಲಿ ಬಿಟ್ಟು ವರ ಪರಾರಿಯಾದ ವಿಚಿತ್ರ ಘಟನೆ ಬೆಂಗಳೂರಿನ ಮಹದೇವಪುರ ಟೆಕ್‌ ಕಾರಿಡಾರ್‌ ಸಮೀಪ ನಡೆದಿದೆ.

ಚಿಕ್ಕಬಳ್ಳಾಪುರ ಮೂಲದ ಜಾರ್ಜ್ ಎಂಬಾತ ವಿವಾಹವಾದ ಮರು ದಿನವೇ ಕಾರಿನಲ್ಲಿ ಪತ್ನಿ ಜೊತೆ ಚರ್ಚ್‌ಗೆ ತೆರಳುತ್ತಿದ್ದ. ದಂಪತಿ ಟ್ರಾಫಿಕ್‌ ಮಧ್ಯೆ ಇರುವಾಗ ವರನ ಮೊಬೈಲ್‌ಗೆ ಆತನ ಹಳೆ ಪ್ರೇಯಸಿಯ ಮೆಸೇಜ್ ಬಂದಿದ್ದು, ಆಕೆ ಸಂದೇಶದಲ್ಲಿ ಪೋಟೋವನ್ನು ಕೂಡ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಹಾಕಿದ್ದಾಳೆ.ಇದರಿಂದ ಹೆದರಿದ ಆತ ಪತ್ನಿಯನ್ನು ಟ್ರಾಫಿಕ್ ನಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಈ ದಂಪತಿ ಫೆಬ್ರವರಿ 15ರಂದು ದಂಪತಿಗಳಿಗೆ ವಿವಾಹವಾಗಿದ್ದು ಫೆ.16ರಂದು ಈ ಘಟನೆ ನಡೆದಿದೆ.ಮಾರ್ಚ್ 5ರಂದು ಆ ಮಹಿಳೆ ಪೋಲಿಸರಿಗೆ ದೂರು ನೀಡಿದ್ದಾಳೆ.

- Advertisement -

Latest News

error: Content is protected !!