Thursday, June 4, 2026
Homeತಾಜಾ ಸುದ್ದಿಮದುವೆಯಾದ ಮರುದಿನವೇ ಮದುಮಗ ಕೋವಿಡ್ ಗೆ ಬಲಿ

ಮದುವೆಯಾದ ಮರುದಿನವೇ ಮದುಮಗ ಕೋವಿಡ್ ಗೆ ಬಲಿ

- Advertisement -
- Advertisement -

ಬಳ್ಳಾರಿ: ಮದುವೆಯಾದ ಮರುದಿನವೇ ಮದುಮಗ ಕೋವಿಡ್ಪ ಗೆ ಬಲಿಯಾಗಿರುವ ಘಟನೆ ಬಳ್ಳಾರಿಯ ವಿಜಯನಗರ ಬಡಾವಣೆಯಲ್ಲಿ ನಡೆದಿದೆ. ಗುರುವಾರ ಹಸೆಮಣೆ ಏರಿದ್ದ ನವ ವಿವಾಹಿತ ಬಸವರಾಜ ಭಜಂತ್ರಿ (36) ಕೋವಿಡ್ ನಿಂದ ನಿನ್ನೆ ಮೃತಪಟ್ಟಿದ್ದಾರೆ.

ಪಟ್ಟಣದ ಶಾದಿ ಮಹಲ್ ನಲ್ಲಿ ಅವರ ವಿವಾಹ ಜರುಗಿತ್ತು. ಮದುವೆ ಕಾರ್ಯದ ಬಳಿಕ ಅಸ್ವಸ್ಥಗೊಂಡು ವಿಶ್ರಾಂತಿಯಲ್ಲಿದ್ದ ಅವರಿಗೆ ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಆರೋಗ್ಯದಲ್ಲಿ ಏರುಪೇರಾಗಿದೆ. ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ಮೃತದೇಹದ ಗಂಟಲುದ್ರವ ತಪಾಸಣೆ ನಡೆಸಿದಾಗ ಕೋವಿಡ್ ತಗುಲಿದ್ದು ದೃಢಪಟ್ಟಿದೆ.

- Advertisement -

Latest News

error: Content is protected !!