Saturday, April 20, 2024
Homeತಾಜಾ ಸುದ್ದಿಕೊರೊನಾಗೆ ಬಲಿಯಾದ ಕನ್ನಡದ ಯುವ ನಿರ್ಮಾಪಕ

ಕೊರೊನಾಗೆ ಬಲಿಯಾದ ಕನ್ನಡದ ಯುವ ನಿರ್ಮಾಪಕ

spot_img
- Advertisement -
- Advertisement -

ಬೆಂಗಳೂರು::  ಮಹಾಮಾರಿ ಕೊರೊನಾಗೆ ಸ್ಯಾಂಡಲ್ ವುಡ್ ನ ಮತ್ತೋರ್ವ ನಿರ್ಮಾಪಕರು ಕನ್ನಡದ ಯುವ ನಿರ್ಮಾಪಕ ರಾಜಶೇಖರ್ ಕೊರೊನಾಗೆ ಬಲಿಯಾಗಿದ್ದಾರೆ.

ಇನ್ನು ಈ ಬಗ್ಗೆ ನಟ ನೀನಾಸಂ ಸತೀಶ್​ ಬೇಸರ ಹೊರ ಹಾಕಿದ್ದಾರೆ. ಪೇಟ್ರೋಮ್ಯಾಕ್ಸ್ ಸಿನಿಮಾಗೆ ರಾಜಶೇಖರ್​ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಈ ಸಿನಿಮಾ ಆಗಲು ಅವರ ಪಾತ್ರ ತುಂಬಾನೇ ದೊಡ್ಡದಿದೆ ಎಂದು ನೀನಾಸಂ ಸತೀಶ್​ ಎಂದಿದ್ದಾರೆ.

ರಾಜು ಕನ್ನಡ ಚಿತ್ರರಂಗದಲ್ಲಿ ಬದುಕು ಕಟ್ಟುವ ಹಂತದಲ್ಲಿದ್ದ ಮಹತ್ವಾಕಾಂಕ್ಷಿ. ನಮ್ಮ ಪೇಟ್ರೋಮ್ಯಾಕ್ಸ್ ಚಿತ್ರ ಆಗಲು ಮುಖ್ಯವಾದ ವ್ಯಕ್ತಿ. ಅವರ ಜತೆ ಜಗಳ, ಪ್ರೀತಿ ಎಲ್ಲವೂ ಇತ್ತು. ಕಾರ್ಯಕಾರಿ ನಿರ್ಮಾಪಕರಾಗಿ 2 ತಿಂಗಳು ನಮ್ಮ ಜೊತೆಗಿದ್ದರು. ಪೆಟ್ರೋಮ್ಯಾಕ್ಸ್ ಗೆದ್ದು ಅದರ ಅದ್ದೂರಿ ಸಮಾರಂಭ ಮಾಡುವ ಕನಸು ಕಂಡಿದ್ದರು ಎಂದು ಸತೀಶ್​ ಬರೆದುಕೊಂಡಿದ್ದಾರೆ.

ರಾಜು ಯಾವಾಗಲು ನಗುತ್ತ ಸೆಟ್ ಅಲ್ಲಿ ಕೂತಿರುತ್ತಿದ್ದನ್ನು ನೆನಪಿಸಿಕೊಂಡರೆ ಎದೆಗೆ ಭರ್ಜಿ ಚುಚ್ಚಿದಂತಾಗುತ್ತದೆ. ಮೈಸೂರಿನಲ್ಲಿ ರಾತ್ರಿಯೆಲ್ಲ ಜೊತೆಗಿದ್ದು, ಕಾರು ಹತ್ತಿಸಿ ನಾವು ಗೆಲ್ತೀವಿ. ನಡೆಯಿರಿ ನೆಮ್ಮದಿಯಾಗಿ ನಿದ್ದೆ ಮಾಡಿ ಎಂದು ಹೇಳಿ ರಾಜು ನೀನು ಚಿರನಿದ್ರೆಗೆ ಜಾರಿದ್ದು ತಪ್ಪಲ್ಲವೇ? ಅಂತಿಮ ನಮನ ಸಲ್ಲಿಸಲು ನನಗೆ ಮನಸ್ಸಾಗುತ್ತಿಲ್ಲ ಕ್ಷಮಿಸಿ ಎಂದಿದ್ದಾರೆ.

- Advertisement -
spot_img

Latest News

error: Content is protected !!