Thursday, June 4, 2026
Homeತಾಜಾ ಸುದ್ದಿಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ: 12 ಕೊರೊನಾ ರೋಗಿಗಳು ಸಾವು

ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ: 12 ಕೊರೊನಾ ರೋಗಿಗಳು ಸಾವು

- Advertisement -
- Advertisement -

ಬರುಚ್​: ಇಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಆಸ್ಪತ್ರೆಯೊಂದರಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ ಸುಮಾರು ಕನಿಷ್ಠ 12 ಮಂದಿ ಕೊರೋನಾ ರೋಗಿಗಳು ಮೃತಪಟ್ಟಿರುವ ಘಟನೆ ಗುಜರಾತ್​ನ ಬರುಚ್​ನಲ್ಲಿರುವ ನಡೆದಿದೆ.

ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹೊಗೆಯಿಂದಾಗಿ ಉಸಿರಾಡಲು ಆಗದೇ 12 ಕೊರೊನಾ ರೋಗಿಗಳು ಸಾವನ್ನಪ್ಪಿದ್ದಾರೆ. ಒಂದು ಗಂಟೆಯೊಳಗೆ ಬೆಂಕಿಯನ್ನು ತಹಬದಿಗೆ ತಂದು 50 ಕ್ಕೂ ಹೆಚ್ಚು ಇತರೆ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಬರುಚ್ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಸಿನ್ಹ್ ಚುದಾಸಮಾ ಹೇಳಿದ್ದಾರೆ.

ಬರುಚ್​-ಜಂಬುಸರ್​ ಹೆದ್ದಾರಿ ಬಳಿಯಿದ್ದ ನಾಲ್ಕು ಅಂತಸ್ತಿನ ಕಟ್ಟಡವನ್ನು ಕೋವಿಡ್​ 19 ಆಸ್ಪತ್ರೆಯಾಗಿ ಮಾಡಲಾಗಿತ್ತು, ಇದನ್ನು ಟ್ರಸ್ಟ್​ ಒಂದು ನಡೆಸುತ್ತಿತ್ತು. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನೆಲಮಹಡಿಯಲ್ಲಿರುವ ಕೋವಿಡ್​ ವಾರ್ಡ್​ನಲ್ಲಿ ಬೆಂಕಿ ಹೊತ್ತಿಕೊಂಡಿತು ಎಂದು ಅಗ್ನಿಶಾಮಕ ಅಧಿಕಾರಿ ಶೈಲೇಶ್​ ಸಾನ್ಸಿಯಾ ಹೇಳಿದ್ದಾರೆ.

ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

- Advertisement -

Latest News

error: Content is protected !!