Wednesday, May 22, 2024
Homeತಾಜಾ ಸುದ್ದಿಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದು, ಹಿಂದೂ ಧರ್ಮದ ಸುಧಾರಣೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮಹಾನ್ ಸಂತರ ಸ್ತಬ್ಧಚಿತ್ರಕ್ಕೆ...

ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದು, ಹಿಂದೂ ಧರ್ಮದ ಸುಧಾರಣೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮಹಾನ್ ಸಂತರ ಸ್ತಬ್ಧಚಿತ್ರಕ್ಕೆ ಅನುಮತಿ ನೀಡಬೇಕು: ಕೇಮಾರು ಶ್ರೀ

spot_img
- Advertisement -
- Advertisement -

ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೇರಳದಿಂದ ಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿದ್ದು ಸದ್ಯ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಭುಗಿಲೆದ್ದಿದೆ , ವಿಶ್ವಸಂತ, ಮಹಾನ್ ಮಾನವತಾವಾದಿ ಅವಧೂತ ನಾರಾಯಣ ಗುರುಗಳಿಗೆ ಆದ ಅನ್ಯಾಯದ ಬಗ್ಗೆ, ಸಾಂದೀಪನಿ ಸಾಧನಾಶ್ರಮ ಕೇಮಾರು ಇಲ್ಲಿಯ ಶ್ರೀಶ್ರೀ ಈಶ ವಿಠಲದಾಸ ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಶತಮಾನದ ಹಿಂದಿನಿಂದಲೂ ಅಸ್ಪೃಶ್ಯತೆಯ ವಿರುದ್ಧ ಸಿಡಿದೆದ್ದು, ಹಿಂದೂ ಧರ್ಮದ ಸುಧಾರಣೆಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಮಹಾನ್ ಸಂತರ ಸ್ತಬ್ಧಚಿತ್ರಕ್ಕೆ ಅನುಮತಿ ನೀಡಬೇಕು, ಈಗಾಗಲೇ ಅನುಮತಿ ತಿರಸ್ಕರಿಸಿದ ಸಮಿತಿಯು ಕೂಡಲೇ ಈ ಬಗ್ಗೆ ಪುನರ್ ವಿಮರ್ಶಿಸಿ ಕ್ರಮ ಕೈಗೊಳ್ಳಬೇಕೆಂದು ಶ್ರೀಗಳು ಒತ್ತಾಯಿಸಿದ್ದಾರೆ

ಪ್ರತಿ ಬಾರಿಯೂ ರಾಜ್ಯೋತ್ಸವ ಪರೇಡ್ ನಲ್ಲಿ ರಾಜ್ಯದ ಸ್ತಬ್ದ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ಈ ಬಾರಿ ಕೇರಳ ರಾಜ್ಯ ಕಳುಹಿಸಿದ ಚಿತ್ರವು ತೀರಸ್ಕೃತಗೊಂಡಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಕೇರಳದ ಸ್ತಬ್ಧ ಚಿತ್ರದಲ್ಲಿ ಮಹಿಳೆಯರ ಸುರಕ್ಷತೆಯ ವಿಷಯದೊಂದಿಗೆ ಜಟಾಯು ಪಕ್ಷಿ ಹಾಗೂ ಹಿಂದೂ ಧರ್ಮದ ಸುಧಾರಕ ಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಸಿದ್ಧಪಡಿಸಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದ ಕೇಂದ್ರವು, ನಾರಾಯಣ ಗುರುಗಳ ಬದಲಾಗಿ ಶಂಕರಾಚಾರ್ಯರ ಪ್ರತಿಮೆಯ ಬಳಕೆಗೆ ಸೂಚಿಸಿತ್ತು. ಇದಾದ ಬಳಿಕ ಕೇರಳದ ಸ್ತಬ್ದ ಚಿತ್ರಕ್ಕೆ ಅನುಮತಿ ತಿರಸ್ಕರಿಸಲಾಗಿದೆ.

- Advertisement -
spot_img

Latest News

error: Content is protected !!