Friday, June 27, 2025
Homeತಾಜಾ ಸುದ್ದಿಬಾಲಕಿಯ ಸ್ತನ ಹಿಡಿಯುವುದು ಅತ್ಯಾಚಾರ ಯತ್ನವಲ್ಲ; ಅಲಹಾಬಾದ್‌ ಹೈಕೋರ್ಟ್‌ ತೀರ್ಪಿಗೆ ತಡೆ

ಬಾಲಕಿಯ ಸ್ತನ ಹಿಡಿಯುವುದು ಅತ್ಯಾಚಾರ ಯತ್ನವಲ್ಲ; ಅಲಹಾಬಾದ್‌ ಹೈಕೋರ್ಟ್‌ ತೀರ್ಪಿಗೆ ತಡೆ

spot_img
- Advertisement -
- Advertisement -

ನವದೆಹಲಿ: ಕೆಲದಿನಗಳ ಹಿಂದೆಯಷ್ಟೇ ಅಲಹಾಬಾದ್‌ ಹೈಕೋರ್ಟ್‌ ಮಹಿಳೆಯರಿಗೆ ಸಂಬಂಧಿಸಿದ ವಿಚಾರದಲ್ಲಿ ‘ಬಾಲಕಿಯ ಸ್ತನಗಳನ್ನು ಹಿಡಿಯುವುದು ಹಾಗೂ ಆಕೆಯ ಪೈಜಾಮದ ದಾರವನ್ನು ತುಂಡು ಮಾಡುವುದು ಅತ್ಯಾಚಾರ ಅಥವಾ ಅತ್ಯಾಚಾರ ಪ್ರಯತ್ನದ ಅಪರಾಧವಾಗುವುದಿಲ್ಲ,’ ಎನ್ನುವಂತಹ ವಿವಾದಿತ ಆದೇಶವನ್ನು ನೀಡಿದ್ದು, ಇದೀಗ ಆ ಆದೇಶಕ್ಕೆ ಸುಪ್ರೀಂಕೋರ್ಟ್‌ ಮಾರ್ಚ್ 26 ಬುಧವಾರದಂದು ತಡೆ ನೀಡಿದೆ.

ಸುಪ್ರೀಂಕೋರ್ಟ್‌ ಸ್ವಯಂ ಪ್ರೇರಿತವಾಗಿ ಈ ಪ್ರಕರಣದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. 

ಅಲಹಾಬಾದ್‌ ಹೈಕೋರ್ಟ್‌ ನ ತೀರ್ಪಿನ ಕೆಲವೊಂದು ಅಂಶಗಳು ನೋವು ತಂದಿದ್ದು, ಈ ಪ್ರಕರಣದ ಬಗ್ಗೆ ಕೇಂದ್ರ ಮತ್ತು ಉತ್ತರಪ್ರದೇಶ ಸರ್ಕಾರ ಉತ್ತರ ನೀಡುವಂತೆ ಸುಪ್ರೀಂಕೋರ್ಟ್‌ ನ ಜಸ್ಟೀಸ್‌ ಬಿ.ಆರ್.ಗವಾಯಿ ಮತ್ತು ಜಸ್ಟೀಸ್‌ ಅಗಸ್ಟಿನ್‌ ಜಾರ್ಜ್‌ ಮಸಿಹ್‌ ಅವರನ್ನೊಳಗೊಂಡ ಪೀಠ ಸೂಚನೆ ನೀಡಿದೆ. 

- Advertisement -
spot_img

Latest News

error: Content is protected !!