Wednesday, June 3, 2026
Homeಕರಾವಳಿಮಂಗಳೂರುಸುಳ್ಯ; ಮಾವಿನ ಮರವೇರಿ ಮಾವಿನಮಿಡಿ ಕೊಯ್ಯುತ್ತಿದ್ದಾಗ ಗೆಲ್ಲು ತುಂಡಾಗಿ ಬಿದ್ದು ವ್ಯಕ್ತಿ ಸಾವು

ಸುಳ್ಯ; ಮಾವಿನ ಮರವೇರಿ ಮಾವಿನಮಿಡಿ ಕೊಯ್ಯುತ್ತಿದ್ದಾಗ ಗೆಲ್ಲು ತುಂಡಾಗಿ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಸುಳ್ಯ; ಮಾವಿನ ಮರವೇರಿ ಮಾವಿನಮಿಡಿ ಕೊಯ್ಯುತ್ತಿದ್ದಾಗ ಗೆಲ್ಲು ತುಂಡಾಗಿ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಉಬರಡ್ಕದಲ್ಲಿ ನಡೆದಿದೆ.

ಉಬರಡ್ಕದ ನೆಯ್ಯೋಣಿ ನಿವಾಸಿ ಜನಾರ್ದನ ಪೂಜಾರಿ  ಮೃತ ದುರ್ದೈವಿ. ಉಬರಡ್ಕದ ನೆಯ್ಯೋಣಿ ನಿವಾಸಿ ಜನಾರ್ದನ ಪೂಜಾರಿಯವರ ಮಾ.೨೨ರಂದು ಕೆಲಸಕ್ಕೆ ಹೋಗಿದ್ದಲ್ಲಿ ಮಾವಿನ ಮರ ಹತ್ತಿ ಮಾವಿನಮಿಡಿ ಕೊಯ್ಯುತ್ತಿದ್ದಾಗ ತಾನು ನಿಂತಿದ್ದ ಗೆಲ್ಲು ತುಂಡಾಗಿ ಬಿದ್ದು ಇವರು ಕೂಡಾ ಕೆಳಕ್ಕೆ ಬಿದ್ದರು. ಪರಿಣಾಮ ಅವರ ಸೊಂಟಕ್ಕೆ ಹಾಗೂ ತಲೆಗೆ ಗಾಯವಾಗಿದೆ. ತಕ್ಷಣ ಅವರನ್ನು ಸುಳ್ಯ ಆಸ್ಪತ್ರೆಗೆ ಕರೆತಂದು ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!