Saturday, September 26, 2026
Homeಕರಾವಳಿವೆನ್ಲಾಕ್ ಆಸ್ಪತ್ರೆ ವಿಸ್ತರಣೆಗೆ ಸರ್ಕಾರದ ಒತ್ತು: 400 ಹೆಚ್ಚುವರಿ ಹಾಸಿಗೆ ಸೇರ್ಪಡೆ

ವೆನ್ಲಾಕ್ ಆಸ್ಪತ್ರೆ ವಿಸ್ತರಣೆಗೆ ಸರ್ಕಾರದ ಒತ್ತು: 400 ಹೆಚ್ಚುವರಿ ಹಾಸಿಗೆ ಸೇರ್ಪಡೆ

- Advertisement -
- Advertisement -

ಮಂಗಳೂರು: ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಾಮರ್ಥ್ಯ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಆಸ್ಪತ್ರೆಯಲ್ಲಿ ಹಂತ ಹಂತವಾಗಿ 400 ಹೆಚ್ಚುವರಿ ಹಾಸಿಗೆಗಳನ್ನು ಸೇರ್ಪಡೆಗೊಳಿಸಲು ಅನುಮೋದನೆ ನೀಡಲಾಗಿದೆ. ಮೊದಲ ಹಂತದಲ್ಲಿ 200 ಹಾಸಿಗೆಗಳ ಸೇರ್ಪಡೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.

ಮೊದಲ ಹಂತದ 200 ಹಾಸಿಗೆಗಳಲ್ಲಿ 50 ಐಸಿಯು ಹಾಸಿಗೆಗಳು ಇರಲಿದ್ದು, 30 ವೆಂಟಿಲೇಟರ್ ಹಾಗೂ 20 ಸ್ಟೆಪ್‌-ಡೌನ್ ಹಾಸಿಗೆಗಳನ್ನು ಒಳಗೊಂಡಿರಲಿವೆ. 10 ಹಾಸಿಗೆಗಳನ್ನು ತುರ್ತು ಚಿಕಿತ್ಸೆಗೆ ಹಾಗೂ ಉಳಿದ 140 ಹಾಸಿಗೆಗಳನ್ನು ಸಾಮಾನ್ಯ ವಾರ್ಡ್‌ಗಳಿಗೆ ಬಳಸಲು ಯೋಜಿಸಲಾಗಿದೆ.

ಈ ವಿಸ್ತರಣೆಗೆ ಅಗತ್ಯವಿರುವ ವೈದ್ಯಕೀಯ ಉಪಕರಣ, ಪೀಠೋಪಕರಣ ಹಾಗೂ ಮೂಲಸೌಕರ್ಯಗಳನ್ನು ಲಭ್ಯವಿರುವ ಬಂಡವಾಳ ಅನುದಾನದೊಳಗೆ ಕಲ್ಪಿಸುವಂತೆ ಸರ್ಕಾರ ಸೂಚಿಸಿದೆ. ವೈದ್ಯರು, ಶುಶ್ರೂಷಕರು ಹಾಗೂ ಇತರೆ ಸಿಬ್ಬಂದಿ ನೇಮಕಾತಿಗೆ ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಗಿದ್ದು, ಮೊದಲ ಹಂತದಲ್ಲಿ ಸುಮಾರು 195 ಸಿಬ್ಬಂದಿ, 115 ಸ್ಟಾಫ್ ನರ್ಸ್‌ಗಳು ಸೇರಿದಂತೆ, ಒದಗಿಸುವ ಯೋಜನೆಯಿದೆ.

- Advertisement -

Latest News

error: Content is protected !!