Sunday, September 27, 2026
Homeಕರಾವಳಿಪಡೀಲ್‌ನ ಕಾರು ಶೋರೂಂನಲ್ಲಿ ಬೆಂಕಿ; ಹಲವು ವಾಹನಗಳಿಗೆ ಹಾನಿ

ಪಡೀಲ್‌ನ ಕಾರು ಶೋರೂಂನಲ್ಲಿ ಬೆಂಕಿ; ಹಲವು ವಾಹನಗಳಿಗೆ ಹಾನಿ

- Advertisement -
- Advertisement -

ಮಂಗಳೂರು: ಪಡೀಲ್‌ನ ಕಾರು ಶೋರೂಂವೊಂದರಲ್ಲಿ ಶುಕ್ರವಾರ ರಾತ್ರಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಶೋರೂಂನಲ್ಲಿ ನಿಲ್ಲಿಸಿದ್ದ ಹಲವು ಕಾರುಗಳಿಗೆ ಹಾನಿಯಾಗಿದೆ.

ರಾತ್ರಿ ಸುಮಾರು 8 ಗಂಟೆ ವೇಳೆಗೆ ಶೋರೂಂನಿಂದ ದಟ್ಟ ಹೊಗೆ ಕಾಣಿಸಿಕೊಂಡ ಬಳಿಕ ಬೆಂಕಿ ವ್ಯಾಪಿಸಿದೆ. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೆಲ ಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ನಷ್ಟದ ಪ್ರಮಾಣ ಇನ್ನಷ್ಟೇ ಅಂದಾಜಿಸಬೇಕಿದೆ.

- Advertisement -

Latest News

error: Content is protected !!