Tuesday, May 7, 2024
Homeತಾಜಾ ಸುದ್ದಿರಾಜಕೇಸರಿ ಬಸವನಬೈಲು ವತಿಯಿಂದ ಜನಪರ ಯೋಜನೆಗಳ ನೋಂದಣಿ ಶಿಬಿರ

ರಾಜಕೇಸರಿ ಬಸವನಬೈಲು ವತಿಯಿಂದ ಜನಪರ ಯೋಜನೆಗಳ ನೋಂದಣಿ ಶಿಬಿರ

spot_img
- Advertisement -
- Advertisement -

ಬೆಳ್ತಂಗಡಿ : ಅಖಿಲ ಕರ್ನಾಟಕ ರಾಜ ಕೇಸರಿ (ರಿ) ಇದರ ಸಹಸಂಸ್ಥೆಯಾದ ರಾಜಕೇಸರಿ ಬಸವನಬೈಲು ಎರಡನೇ ವರ್ಷದ ಸವಿನೆನಪಿಗಾಗಿ ಆಯುಷ್ಮಾನ್ ಕಾರ್ಡ್ ಕ್ಯಾಂಪ್, ಕಟ್ಟಡ ಕಾರ್ಮಿಕ ಕಾರ್ಡ್ ಹಾಗೂ ಸರಕಾರದ ಜನಪರ ಯೋಜನೆಗಳ ನೋಂದಣಿ ಶಿಬಿರ ನಡೆಯಿತು.  

ಅಖಿಲ ಕರ್ನಾಟಕ ರಾಜ ಕೇಸರಿಯ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಗುರುಪ್ರಸಾದ್ ಅಧ್ಯಕ್ಷರು ರಾಜ ಕೇಸರಿ ಬಸವನ ಬಲು ನೆಲ್ಲಿಗುಡ್ಡೆ ಅವರು ವಹಿಸಿಕೊಂಡಿದ್ದರು. ಸಭಾಧ್ಯಕ್ಷ ಸ್ಥಾನವನ್ನು ಬಂಟ್ವಾಳದ ಶಾಸಕರಾದ ರಾಜೇಶ್ ನಾಯಕ್ ಅವರು ವಹಿಸಿಕೊಂಡಿದ್ದರು.

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಸಂಜೀವ ಪೂಜಾರಿ, ಹಿಂದೂ ಯುವಸೇನೆ ಬಂಟ್ವಾಳದ ಅಧ್ಯಕ್ಷರಾದ ಪುಷ್ಪರಾಜ್, ಶ್ರೀ ಮಹಾಗಣಪತಿ ದೇವಸ್ಥಾನ ದಂಡೆಯ ಪ್ರಧಾನ ಅರ್ಚಕರಾದ ಗಣೇಶ್ ಪ್ರಸಾದ್ ಉಡುಪ ,  ಪಿಲಿಮೋಗುರು ಶಾಲೆಯ Sdmc ಅಧ್ಯಕ್ಷರಾದ ಪ್ರಕಾಶ್ ಫೆರ್ನಾಂಡಿಸ್, ಉದ್ಯಮಿ ಸಂದೀಪ್ ಶೆಟ್ಟಿ ವಾಮದಪದವು, ಪಿಲಿಮೋಗರು ಶಾಲೆ ಶಿಕ್ಷಕ ಶೇಖರ್ ನಾಯಕ್, ಬೆಳ್ತಂಗಡಿ ರಾಜಕೇಸರಿ  ತಾಲೂಕು ಇದರ ಅಧ್ಯಕ್ಷ ಕಾರ್ತಿಕ್, ಅನುಗ್ರಹ ಜನಸೇವೆ ಕೇಂದ್ರ ಬೆಳ್ತಂಗಡಿ ಇದರ ವ್ಯವಸ್ಥಾಪಕ ನಿರ್ದೇಶಕರಾದ ಎಂ ಜಿ ತಲಹತ್ ಸವಣಾಲು, ಮುಂತಾದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ನೂರಕ್ಕಿಂತ ಅಧಿಕ ಜನ ಭಾಗವಹಿಸಿದ್ದರು.

- Advertisement -
spot_img

Latest News

error: Content is protected !!