Sunday, June 7, 2026
Homeಕರಾವಳಿಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್‌ ಡಿಕ್ಕಿ, ಸ್ಥಳದಲ್ಲೇ ದಾರುಣ ಸಾವು

ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಗೆ ಬೈಕ್‌ ಡಿಕ್ಕಿ, ಸ್ಥಳದಲ್ಲೇ ದಾರುಣ ಸಾವು

- Advertisement -
- Advertisement -

ಮಂಗಳೂರು: ನಗರದ ಹೊರವಲಯದ ಅಡ್ಯಾರು ಕಟ್ಟೆಯ ಬಳಿ ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ, ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಇಂದು ನಡೆದಿದೆ.

ಅಳಪೆ ಪಡೀಲ್‌ ನಿವಾಸಿ 48 ವರ್ಷ ಪ್ರಾಯದ ಮಾಲತಿ ಮೃತ ಮಹಿಳೆ. ಬಸ್ಸಿನಿಂದ ಇಳಿದ ಮಹಿಳೆ ಅಡ್ಯಾರ್ ನಲ್ಲಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಫರಂಗಿಪೇಟೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬೈಕ್‌ ಮಹಿಳೆಗೆ ಡಿಕ್ಕಿ ಹೊಡೆದಿದೆ.

ಇನ್ನು ಬೈಕ್‌ ಚಾಲಕನಿಗೆ ಹಾಗೂ ಹಿಂಬದಿ ಸವಾರರಾದ ಬೈಕ್‌ ಚಾಲಕನ ಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಬಗ್ಗೆ ನಾಗೋರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!