- Advertisement -
![]()
- Advertisement -
ಬೆಂಗಳೂರು: ದೀಪಾವಳಿ ಹಬ್ಬದ ಹೊತ್ತಲ್ಲಿ ಆಭರಣದ ದರ ಏರಿಕೆಯಾಗುವುದು ರೂಢಿ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಆಭರಣ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಕಳೆದ ವಾರ 10 ಗ್ರಾಂ ಚಿನ್ನದ ಬೆಲೆಯಲ್ಲಿ ಒಟ್ಟು 770 ರೂ. ಇಳಿಕೆ ಕಂಡಂತಾಗಿದೆ.
ಹಣದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ ಚಿನ್ನದ ಬೆಲೆಯನ್ನು ನಿರ್ಧರಿಸುವ ಕಾರಣ ಬೆಲೆಯಲ್ಲಿ ಏರಿಳಿತ ಕಾಣುತ್ತಿದೆ. ಮೂಲಕ ಚಿನ್ನದ ಬೆಲೆ 47,700 ರೂ. ಗೆ ತಲುಪಿದೆ. ಒಟ್ಟಾರೆಯಾಗಿ ಕಳೆದ ವಾರಕ್ಕೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಒಟ್ಟು 770 ರೂ. ಇಳಿಕೆಯಾಗಿದೆ.ಇನ್ನು ಬೆಳ್ಳಿ ಬೆಲೆ ಕೆಜಿಗೆ 1,820 ರೂ. ಇಳಿಕೆಯಾಗಿದ್ದು, ಈ ಮೂಕ ಕೆಜಿ ಬೆಳ್ಳಿ ಬೆಲೆ 63,600 ರೂ. ಆಗಿದೆ.
- Advertisement -


