Sunday, June 7, 2026
Homeತಾಜಾ ಸುದ್ದಿಪ್ರೇಯಸಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ- ಮದುವೆಯಾಗುವುದಿಲ್ಲ ಎಂದಾಕೆಗೆ ಮಾತೇ ಮುಳುವಾಯ್ತು !..

ಪ್ರೇಯಸಿಗೆ ಚಾಕುವಿನಿಂದ ಇರಿದ ಪಾಗಲ್ ಪ್ರೇಮಿ- ಮದುವೆಯಾಗುವುದಿಲ್ಲ ಎಂದಾಕೆಗೆ ಮಾತೇ ಮುಳುವಾಯ್ತು !..

- Advertisement -
- Advertisement -

ಮೈಸೂರು: ಇಲ್ಲಿನ ದೀವಾನ್ಸ್ ರಸ್ತೆಯಲ್ಲಿ ಮದುವೆಗೆ ನಿರಾಕರಿಸಿದ ಪ್ರೇಯಸಿಯನ್ನು ಚಾಕುವಿನಿಂದ ಇರಿದ ಯುವಕ ಪೊಲೀಸರಿಗೆ ಶರಣಾಗಿದ್ದಾನೆ. ಗಗನ್ ಎಂಬ ಪ್ರೇಮಿ ಮನೆ ಮುಂದೆ ನಿಂತಿದ್ದ ಪ್ರೇಯಸಿಗೆ ಚಾಕುವಿನಿಂದ ಇರಿದಿದ್ದಾನೆ.ಇವರಿಬ್ಬರು ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಮದುವೆ ಮಾತುಕತೆ ವೇಳೆ ಇವರಿಬ್ಬರ ಮಧ್ಯೆ ಯುವಕನ ಡ್ರೈವರ್‌ ಉದ್ಯೋಗ ಅಡ್ಡಿ ಆಗಿತ್ತು. ‘ನೀನು ಡ್ರೈವರ್ ಆಗಿರುವುದರಿಂದ ಮದುವೆ ಆಗುವುದಿಲ್ಲ” ಎಂದು ಪ್ರೇಯಸಿ ಹೇಳಿದ್ದು, ಇದರಿಂದ ಆಕ್ರೋಶಗೊಂಡ ಪ್ರಿಯಕರ ಕೃತ್ಯ ಎಸಗಿರುವುದಾಗಿ ತಿಳಿಸಿದ್ದಾನೆ.
ಯುವತಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದು, ಕೊಲೆಗೆ ಯತ್ನಿಸಿದ ಪ್ರೇಮಿ ಪೊಲೀಸರ ವಶದಲ್ಲಿದ್ದಾನೆ. ಮೈಸೂರಿನ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!