Saturday, June 6, 2026
Homeಕರಾವಳಿಉಡುಪಿಕಾರ್ಕಳ : ಚಿನ್ನದ ಅಂಗಡಿಯಿಂದ ಕರಿಮಣಿ ಸರ ಕದ್ದ ಆರೋಪಿ ಅರೆಸ್ಟ್

ಕಾರ್ಕಳ : ಚಿನ್ನದ ಅಂಗಡಿಯಿಂದ ಕರಿಮಣಿ ಸರ ಕದ್ದ ಆರೋಪಿ ಅರೆಸ್ಟ್

- Advertisement -
- Advertisement -

ಕಾರ್ಕಳ : ಚಿನ್ನದ ಅಂಗಡಿಯಿಂದ ಕರಿಮಣಿ ಸರ ಕದ್ದ ಆರೋಪಿ ಅರೆಸ್ಟ್ ಮಾಡಲಾಗಿದೆ.

ಆರೋಪಿ ಮಹಿಳಾ ಸಿಬ್ಬಂದಿಯ ಕಣ್ಣೆದುರಿನಲ್ಲೇ ಚಿನ್ನದ ಕರಿಮಣಿ ಸರ ಎಗರಿಸಿಕೊಂಡು ಪರಾರಿಯಾಗಿದ್ದ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಧಾರವಾಡದ ಜನ್ನತ್‌ ನಗರದ ನಿವಾಸಿಯಾದ ಮೊಹಮ್ಮದ್‌ ಆಲಿ ಖಾನ್‌ ಯಾನೆ ಮೊಹಮದ್‌ ಇರಾನಿ ಬಂಧಿತ.

ಆರೋಪಿಯ ಪತ್ತೆಗಾಗಿ ಕಾರ್ಕಳ ಪೊಲೀಸರು ಧಾರವಾಡಕ್ಕೆ ತೆರಳಿ ಆರೋಪಿಯನ್ನು ಎಂಬಾತನನ್ನು ಬಂಧಿಸಿದ್ದಾರೆ. ಈತ ಇರಾನಿ ತಂಡದ ಸದಸ್ಯ ಎನ್ನಲಾಗಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕಳೆದ ಹಲವು ತಿಂಗಳಿನಿಂದ ವಿಳಾಸ ಕೇಳುವ ನೆಪದಲ್ಲಿ ಪಾದಾಚಾರಿ ಒಂಟಿ ಮಹಿಳೆಯರ ಸರಗಳನ್ನು ಎಗರಿಸಿಕೊಂಡು ಹೋದ ಘಟನೆಗಳು ನಡೆದಿದ್ದು, ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -

Latest News

error: Content is protected !!