Wednesday, June 24, 2026
Homeಕರಾವಳಿಉಡುಪಿಉಡುಪಿ: ಕಾರ್ಲೋತ್ಸವದಲ್ಲಿ ಭಾಗಿಯಾದ ಚಲನಚಿತ್ರ ನಟ ಉಪೇಂದ್ರ

ಉಡುಪಿ: ಕಾರ್ಲೋತ್ಸವದಲ್ಲಿ ಭಾಗಿಯಾದ ಚಲನಚಿತ್ರ ನಟ ಉಪೇಂದ್ರ

- Advertisement -
- Advertisement -

ಉಡುಪಿ: ಕಾರ್ಕಳದಲ್ಲಿ ನಡೆದ ಕಾರ್ಲೋತ್ಸವದಲ್ಲಿ ಇಂದು ಸ್ಯಾಂಡಲ್ ವುಡ್ ನಟ ಉಪೇಂದ್ರ ಭಾಗವಹಿಸಿದ್ದರು.

ಕಾರ್ಲೋತ್ಸವದಲ್ಲಿ ಇತ್ತೀಚೆಗೆ ತೆರೆ ಕಂಡ ಯುಐ ಸಿನಿಮಾದ ಯಶಸ್ಸಿನ ಹಿನ್ನೆಲೆಯಲ್ಲಿ ಕೇಕ್ ಕತ್ತರಿಸಿದ ಉಪೇಂದ್ರ ಸಂಭ್ರಮಾಚರಣೆಯಲ್ಲಿಯೂ ಭಾಗಿಯಾಗಿದ್ದರು.

ಇದೇ ವೇಳೆ ಮಾತನಾಡಿದ ನಟ ಉಪೇಂದ್ರ, ನಾನು ಇದೇ ಊರಿನವನು, ನನ್ನ ಊರಿನವರನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದರಲ್ಲದೇ, ಯುಐ ಸ್ವಲ್ಪ ಕಾಂಪ್ಲಿಕೇಟೆಡ್ ಚಿತ್ರವಾಗಿದ್ದು,
ಇದು ತಲೆಯಲ್ಲಿರುವ ಹುಳವನ್ನು ತೆಗೆಯುವ ಚಲನಚಿತ್ರ ಎಂದು ಹೇಳಿದ್ದಾರೆ.

ನಿನ್ನೆ ಉಡುಪಿಗೆ ಭೇಟಿ ನೀಡಿದ್ದ ಉಪೇಂದ್ರ ಕೃಷ್ಣ ಮಠದಲ್ಲಿ ಶ್ರೀಕೃಷ್ಣನ ದರ್ಶನ ಪಡೆದು, ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಸ್ವೀಕರಿಸಿದ್ದರು.

- Advertisement -

Latest News

error: Content is protected !!