Wednesday, October 14, 2026
Homeತಾಜಾ ಸುದ್ದಿಅದಾನಿಗೆ ಸಹಾಯ ಮಾಡಲು ದೇವರು ಮೋದಿಯನ್ನು ಕಳುಹಿಸಿದ್ದಾರೆ; ರಾಹುಲ್ ಲೇವಡಿ

ಅದಾನಿಗೆ ಸಹಾಯ ಮಾಡಲು ದೇವರು ಮೋದಿಯನ್ನು ಕಳುಹಿಸಿದ್ದಾರೆ; ರಾಹುಲ್ ಲೇವಡಿ

- Advertisement -
- Advertisement -

ಪ್ರಧಾನಿ ನರೇಂದ್ರ ಮೋದಿ ಹೇಳಿರುವ ದೇಶದ ಜನರ ಸೇವೆ ಮಾಡಲು ‘ದೇವರು ನನ್ನನ್ನು ಕಳುಹಿಸಿದ್ದಾರೆ’ ಎಂಬ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.

‘ಅದಾನಿ ಅವರಿಗೆ ಸಹಾಯ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರು ಕಳುಹಿಸಿದ್ದಾರೆ. ಬಡವರ ನೆರವಿಗಾಗಿ ಅಲ್ಲ,” ಎಂದು ತಿಳಿಸಿದರು.

‘ಇಂಡಿಯಾ’ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಮೇಲಿನ ಶೇ 50ರಷ್ಟು ಮಿತಿಯನ್ನು ತೆಗೆದು ಹಾಕುತ್ತೇವೆ’ ಎಂದು ರಾಹುಲ್ ಗಾಂಧಿ ಹೇಳಿದರು.

‘ದಿಲ್, ಜಾನ್ ಔರ್ ಖೂನ್’ (ಹೃದಯ, ಪ್ರಾಣ ಹಾಗೂ ರಕ್ತ)ವನ್ನು ನೀಡಿಯಾದರೂ ಸಂವಿಧಾನವನ್ನು ರಕ್ಷಣೆ ಮಾಡುತ್ತೇವೆ. ಇನ್ನು ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ‘ಅಗ್ನಿಪಥ’ ಯೋಜನೆಯನ್ನು ಹರಿದು ಕಸದ ಬುಟ್ಟಿಗೆ ಎಸೆಯಲಿದ್ದೇವೆ’ ಎಂದು ತಿಳಿಸಿದರು.

- Advertisement -

Latest News

error: Content is protected !!