Tuesday, April 30, 2024
Homeತಾಜಾ ಸುದ್ದಿಹೀಗೊಂದು ವಿಚಿತ್ರ ಮದುವೆ : ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವತಿಯರು

ಹೀಗೊಂದು ವಿಚಿತ್ರ ಮದುವೆ : ವೈವಾಹಿಕ ಜೀವನಕ್ಕೆ ಕಾಲಿಟ್ಟ ಯುವತಿಯರು

spot_img
- Advertisement -
- Advertisement -

ಪಂಜಾಬ್ : ಇಲ್ಲಿನ ಲೂಧಿಯಾನದಲ್ಲಿ ವಿಚಿತ್ರವಾದ ಮದುವೆ ಸಮಾರಂಭವೊಂದು ನಡೆದಿದೆ. ಇಬ್ಬರು ಹುಡುಗಿಯರು ಪರಸ್ಪರ ಪ್ರೀತಿಸಿ, ಮದುವೆ ಆಗಿದ್ದಾರೆ. ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ನಡೆದಿದೆ. ಆ ಹುಡುಗಿಯರಲ್ಲಿ ಒಬ್ಬಾಕೆಯ ಸೋದರ ಕನ್ಯಾದಾನ ಮಾಡಿದ್ದಾನೆ.



ಆ ಹುಡುಗಿಯರಲ್ಲಿ ಒಬ್ಬಳು ಸ್ವಡ್ಡಿ ಕಲನ್ ಗ್ರಾಮದವಳು. ಅವಳ ಮನೆಯವರು ಅವಳ ಜೊತೆಗಿನ ಎಲ್ಲ ಸಂಬಂಧಗಳನ್ನು ಮುರಿಯಲು ನಿರ್ಧರಿಸಿದರು. ಆದರೆ ಸ್ವಡ್ಡಿ ಪಶ್ಚಿಮ್ ಗ್ರಾಮದ ಇನ್ನೊಬ್ಬ ಹುಡುಗಿಯ ಮನೆಯವರು ಈ ಮದುವೆಯನ್ನು ಒಪ್ಪಿಕೊಂಡರು. ಈ ಹುಡುಗಿ – ಹುಡುಗಿ ಮದುವೆಯಿಂದ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ ಎಂದು ಸ್ವಡ್ಡಿ ಕಲನ್ ಗ್ರಾಮದ ಮುಖ್ಯಸ್ಥ ಲಾಲ್ ಸಿಂಗ್ ಹೇಳಿದ್ದಾರೆ. ಹುಡುಗಿಯರು ಮದುವೆ ಆಗಿಬಿಟ್ಟಿರುವುದರಿಂದ ಮತ್ತು ಅದಕ್ಕೆ ಒಂದು ಹುಡುಗಿಯ ಕುಟುಂಬ ಒಪ್ಪಿಗೆ ಕೂಡ ನೀಡಿರುವುದರಿಂದ ನಾವೇನು ಮಾಡುವಂತಿಲ್ಲ ಎಂದು ಸಿಂಗ್ ಹೇಳಿದ್ದಾರೆ.

ಈ ಹುಡುಗಿಯರು ಎರಡು ವರ್ಷದ ಹಿಂದೆಯೇ ಮದುವೆಗೆ ಪ್ರಯತ್ನಿಸಿದ್ದರು. ಆದರೆ, ಜನರು ಇದನ್ನು ವಿರೋಧಿಸಿದ್ದರು, ಪಂಚಾಯತ್ ಕೂಡ ಮಧ್ಯ ಪ್ರವೇಶ ಮಾಡಿತ್ತು ಎಂದು ಗ್ರಾಮ ಮುಖ್ಯಸ್ಥ ಹೇಳಿದ್ದಾರೆ. ಹುಡುಗಿಯರು ಅಪ್ರಾಪ್ತ ವಯಸ್ಕರಲ್ಲದ ಕಾರಣ ಇಲ್ಲಿ ಪೊಲೀಸರ ಪಾತ್ರ ಏನಿಲ್ಲ ಎಂದು ಲುಧಿಯಾನದ ಪೊಲೀಸರು ಹೇಳಿದ್ದಾರೆ.


- Advertisement -
spot_img

Latest News

error: Content is protected !!