ಬೆಳ್ತಂಗಡಿ : ತಿಮರೋಡಿ ಬಗ್ಗೆ ಗಿರೀಶ್ ಮಟ್ಟಣ್ಣವರ್ ಮಾಧ್ಯಮ ಹೇಳಿಕೆ ವಿಚಾರ ಸೇರಿದಂತೆ ಒಟ್ಟು ಮೂರು ಪ್ರಕರಣಗಳ ಬಗ್ಗೆ ಗಿರೀಶ್ ಮಟ್ಟಣ್ಣವರ್ ರನ್ನು ಬೆಳ್ತಂಗಡಿ ಪೊಲೀಸರು ಸೆ.18 ರಂದು ಬೆಳಗ್ಗೆ 11:45 ರಿಂರ ರಾತ್ರಿ 8:30 ರವರೆಗೆ ವಿಚಾರಣೆ ಮಾಡಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಎಲ್ಲೂ ಓಡಿ ಹೋಗಿಲ್ಲ ನಾನು ಈಗ ಉಜಿರೆಯಲ್ಲಿ ಮಾತಾನಾಡಿಕೊಂಡು ಬಂದೆ. ಪೊಲೀಸರಿಗೆ ಸಿಗದಿದ್ದಾರೆ ನನ್ನ ತಪ್ಪಾ ಎಂದು’ ಮಾಧ್ಯಮ ಹೇಳಿಕೆ ಬಗ್ಗೆ ಬೆಳ್ತಂಗಡಿ ವಿಚಾರಣೆ ವೇಳೆ ನಾನು ಮಾಧ್ಯಮಗಳ ಮುಂದೆ ಹೇಳಿದ ವಿಚಾರ ಸುಳ್ಳು ಎಂದು ಬಾಯಿಬಿಟ್ಟಿದ್ದಾರೆ. ಈ ಬಗ್ಗೆ ವಿಡಿಯೋ ದಾಖಲೆ ಮೂಲಕ ಹೇಳಿಕೆ ಪಡೆದುಕೊಂಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಹೊರಭಾಗದಲ್ಲಿ ಮಾನವ ಹಕ್ಕು ಅಧಿಕಾರಿ ಎಂದು ಹುಬ್ಬಳಿಯ ರೌಡಿಶೀಟರ್ ಮದನ್ ಬುಗುಡಿಯನ್ನು ಮಾಧ್ಯಮಗಳ ಮುಂದೆ ಪರಿಚಯಿಸಿದ ಪ್ರಕರಣದಲ್ಲಿ ಮತ್ತು ಧರ್ಮಸ್ಥಳದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ಹಾಕಿದ್ದ ಪ್ರಕರಣಗಳ ವಿಚಾರಣೆ ನಡೆಸಿದ ಬಳಿಕ ಎಫ್ಎಸ್ಎಲ್ ವಿಭಾಗದ ಸೋಕೋ ತಂಡದಿಂದ ಗಿರೀಶ್ ಮಟ್ಟಣ್ಣವರ್ ಬಳಿಯಿಂದ ವಾಯ್ಸ್ ಸ್ಯಾಂಪಲ್ ತೆಗೆದುಕೊಂಡು ಮಹಜರು ನಡೆಸಿದ್ದಾರೆ.


