Wednesday, May 29, 2024
Homeತಾಜಾ ಸುದ್ದಿಕಲಬುರಗಿ: ಹಿರಿಯ ಸಾಹಿತಿ, 'ನಾಡೊಜ' ಗೀತಾ ನಾಗಭೂಷಣ್ ನಿಧನ

ಕಲಬುರಗಿ: ಹಿರಿಯ ಸಾಹಿತಿ, ‘ನಾಡೊಜ’ ಗೀತಾ ನಾಗಭೂಷಣ್ ನಿಧನ

spot_img
- Advertisement -
- Advertisement -

ಕಲಬುರಗಿ: ಕನ್ನಡದ ಹೆಸರಾಂತ ಲೇಖಕಿಯರಲ್ಲಿ ಒಬ್ಬರಾದ ಶ್ರೀಮತಿ ಗೀತಾ ನಾಗಭೂಷಣ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.

ಕಲಬುರಗಿ ನಗರದ ಸ್ವಸ್ತಿಕ ನಗರದಲ್ಲಿ ವಾಸವಾಗಿದ್ದ ಗೀತಾ ನಾಗಭೂಷಣ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇವರು ನಾಡೋಜ ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಪುರಸ್ಕೃತೆಯಾಗಿದ್ದರು. 2010 ರಲ್ಲಿ ಗದಗ ನಗರದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಗೀತಾ ನಾಗಭೂಷಣ ಅವರು ನಾಡೊಜ ಪ್ರಶಸ್ತಿ ಪಡೆದ ಮೊದಲ ಮಹಿಳಾ ಸಾಹಿತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಮಹಿಳಾ ಸಾಹಿತಿ ಕೂಡಾ ಆಗಿದ್ದಾರೆ.

ಇವರ ಬದುಕು ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ಅಲ್ಲದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಮೊದಲ ಮಹಿಳಾ ಸಾಹಿತಿ ಎಂಬ ಹೆಗ್ಗಳಿಕೆಯೂ ಇವರದೆ.

‘ಬದುಕು’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಇವರು ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ(೨00೨) ಕರ್ನಾಟಕ ರಾಜ್ಯ ಪ್ರಶಸ್ತಿ(೧೯೯೮), ನಾಡೋಜ ಪ್ರಶಸ್ತಿ(೨00೪), ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಪರಿಷತ್ತಿನಿಂದ ಮಲ್ಲಿಕಾ ಪ್ರಶಸ್ತಿ ಪಡೆದಿದ್ದಾರೆ

- Advertisement -
spot_img

Latest News

error: Content is protected !!