Saturday, June 6, 2026
Homeತಾಜಾ ಸುದ್ದಿಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ; ಹಾಸನದ 3 ಕಡೆ ಎಸ್‌ಐಟಿ ಅಧಿಕಾರಿಗಳ ದಾಳಿ

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ; ಹಾಸನದ 3 ಕಡೆ ಎಸ್‌ಐಟಿ ಅಧಿಕಾರಿಗಳ ದಾಳಿ

- Advertisement -
- Advertisement -

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡ ಹಾಸನದ 3 ಕಡೆ ದಾಳಿ ನಡೆದಿದೆ.ಏಕಕಾಲಕ್ಕೆ ಹಾಸನ ಜಿಲ್ಲೆಯ 3 ಕಡೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸರ್ಚ್ ವಾರೆಂಟ್ ನೋಂದಿಗೆ ಆಗಮಿಸಿದ ಎಸ್‌ಐಟಿ ಪೊಲೀಸರು, ಹಾಸನ ಜಿಲ್ಲೆಯ 3 ಕಡೆ ದಾಳಿ ನಡೆಸಿದ್ದಾರೆ.ಹತ್ತಾರು ಅಧಿಕಾರಿಗಳ ತಂಡದಿಂದ ಮೂರು ಕಡೆ ಶೋಧಕಾರ್ಯ ನಡೆಸಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀ ವೀಡಿಯೋ ಪ್ರಕರಣ ಸಂಬಂಧ ಹೊಳೆನರಸೀಪುರ ರೇವಣ್ಣ ಮನೆ, ಹಾಸನದ ಎಂ.ಪಿ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಇದಲ್ಲದೇ ಚನ್ನರಾಯಪಟ್ಟಣದ ಗನ್ನಿಕಡ ತೋಟದ ಮನೆಯಲ್ಲೂ ಎಸ್‌ಐಟಿ ಶೋಧ ನಡೆಸುತ್ತಿದೆ.

ಇನ್ಸ್ ಪೆಕ್ಟರ್ ರಾವ್ ಗಣೇಶ್, ಶೋಭಾ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿದೆ. ಎಫ್ ಎಸ್ ಎಲ್ ತಂಡದೊಂದಿಗೆ ಎಸ್‌ಐಟಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!