Wednesday, May 15, 2024
Homeತಾಜಾ ಸುದ್ದಿಲಾಕ್ ಡೌನ್ ನಡುವೆಯೇ ಸರಳವಾಗಿ ಮೂರನೇ ಮದುವೆಯಾದ ಜನಪ್ರಿಯ ನಟಿ..!

ಲಾಕ್ ಡೌನ್ ನಡುವೆಯೇ ಸರಳವಾಗಿ ಮೂರನೇ ಮದುವೆಯಾದ ಜನಪ್ರಿಯ ನಟಿ..!

spot_img
- Advertisement -
- Advertisement -

ಲಾಕ್​ಡೌನ್ ಅವಧಿಯಲ್ಲಿ ವಿವಾಹವಾದ ಸೆಲೆಬ್ರಿಟಿಗಳ ಪಟ್ಟಿಗೆ ಹೊಸ ಸೇರ್ಪಡೆ ನಟಿ ವನಿತಾ ವಿಜಯಕುಮಾರ್-ಪೀಟರ್ ಪೌಲ್. ಕೆಲ ದಿನಗಳ ಹಿಂದೆಯಷ್ಟೇ ನನಗೆ ಲಾಕ್​ಡೌನ್ ವೇಳೆ ಲವ್ ಆಗಿದೆ ಎಂದಿದ್ದ ನಟಿ, ಇದೇ ತಿಂಗಳೊಳಗೆ ವಿವಾಹವಾಗುವುದು ತಿಳಿಸಿದ್ದರು. ಅದರಂತೆ ನಿನ್ನೆ ನಡೆದ ಸರಳ ಕಾರ್ಯಕ್ರಮದ ಮೂಲಕ ಮೂರನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕಾಲಿವುಡ್​ನ ಹಿರಿಯ ನಟ ವಿಜಯಕುಮಾರ್ ಪುತ್ರಿ ವನಿತಾ ಸಣ್ಣ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ನಾಲ್ಕು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟಿ 20ನೇ ವಯಸ್ಸಿನಲ್ಲೇ ವಿವಾಹವಾಗಿ ಅಚ್ಚರಿ ಮೂಡಿಸಿದ್ದರು.

ಆ ಬಳಿಕ ನಟಿ ಸುದ್ದಿಯಾಗಿದ್ದು ವೈಯುಕ್ತಿಕ ಕಾರಣಗಳಿಂದ. ಸದಾ ಒಂದಲ್ಲ ಒಂದು ವಿವಾದಗಳಿಂದ ಗಮನ ಸೆಳೆಯುತ್ತಿದ್ದ ನಟಿ, 2000ರಲ್ಲಿ ತಮಿಳು ನಟ ಆಕಾಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಕೇವಲ ಐದು ವರ್ಷದಲ್ಲೇ ಈ ತಾರಾ ಜೋಡಿ ವಿಚ್ಛೇದನ ಪಡೆದು ದೂರವಾಗಿದ್ದರು.

2007 ರಲ್ಲಿ ರಾಜನ್ ಆನಂದ್ ಎಂಬ ಉದ್ಯಮಿಯನ್ನು ವರಿಸಿದ್ದ ನಟಿ ಮೂರು ವರ್ಷಗಳಲ್ಲಿ ಡೈವೋರ್ಸ್ ಪಡೆದಿದ್ದರು. ಆ ಬಳಿಕ ನಟಿಯ ಹೆಸರಿನೊಂದಿಗೆ ಕಾಲಿವುಡ್​ನ ಖ್ಯಾತ ನೃತ್ಯ ನಿರ್ದೇಶಕ ರಾಬರ್ಟ್ ಹೆಸರು ತಳುಕು ಹಾಕಿಕೊಂಡಿತ್ತು.

ವಿಚ್ಛೇದನ ಪ್ರಕರಣಗಳಿಂದ ಸುದ್ದಿಯಲ್ಲಿದ್ದ ನಟಿ ತಮಿಳಿನ ಬಿಗ್​ಬಾಸ್-3 ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ವಿವಾದ ಹುಟ್ಟುಹಾಕುತ್ತಿದ್ದಂತೆ ಅತ್ತ ತೆಲಂಗಾಣ ಪೊಲೀಸರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದರು.

ಇದಕ್ಕೆ ಕಾರಣ ವನಿತಾ ವಿಜಯಕುಮಾರ್ ತನ್ನ ಸ್ವಂತ ಮಗಳನ್ನೇ ಅಪಹರಣ ಮಾಡಿದ ಆರೋಪ ಕೇಳಿ ಬಂದಿತ್ತು. ರಾಜನ್ ಆನಂದ್ ಅವರೊಂದಿಗಿನ ತನ್ನ 10 ವರ್ಷ ಮಗಳನ್ನು ಕಿಡ್ನಾಪ್ ಮಾಡಲು ನಟಿ ಯತ್ನಿಸಿದ್ದರು ಎಂದು ಆರೋಪಿಸಲಾಗಿತ್ತು.

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವನಿತಾ ವಿಜಯಕುಮಾರ್ ಅವರಿಗೆ ಬಿಗ್ ಬಾಸ್ ಮನೆಯಿಂದ ಗೇಟ್ ಪಾಸ್ ನೀಡಲಾಗಿತ್ತು. ಅದಾದ ಬಳಿಕ ಮತ್ತೊಮ್ಮೆ ವೈಲ್ಡ್​ ಕಾರ್ಡ್​ ಎಂಟ್ರಿ ಮೂಲಕ ದೊಡ್ಮನೆಯಲ್ಲಿ ಕೋಲಾಹಲ ಎಬ್ಬಿಸಿದ್ದರು.

ಆ ಬಳಿಕ ಸದ್ದು ಸುದ್ದಿಯಿಲ್ಲದೇ ಮರೆಯಾಗಿದ್ದ ವಿವಾದಾತ್ಮಕ ನಟಿ ಈಗ ಮೂರನೇ ಮದುವೆ ಸಿಹಿ ಸುದ್ದಿಯೊಂದಿಗೆ ಆಗಮಿಸಿದ್ದಾರೆ. ಲಾಕ್​ಡೌನ್ ಸಮಯದಲ್ಲಿ ನಟಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದರು. ಇದೇ ವೇಳೆ ವಿಡಿಯೋ ಚಿತ್ರೀಕರಣಕ್ಕೆ ಕ್ಯಾಮೆರಾಗಳಿರಲಿಲ್ಲ. ಆಗ ನೆನಪಾಗಿದ್ದು ಪರಿಚಿತ ಪೀಟರ್.

ಪೀಟರ್ ವಿಎಫ್‌ಎಕ್ಸ್ ತಂತ್ರಜ್ಞ, ಇವರು ಭಾರತೀಯ ಮತ್ತು ಹಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಹಾಗೆಯೇ ಬಿಗ್ ಬಾಸ್​ನಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ವಿಡಿಯೋ ಚಿತ್ರೀಕರಣಕ್ಕಾಗಿ ವನಿತಾ ಪೀಟರ್ ಸಹಾಯವನ್ನು ಯಾಚಿಸಿದ್ದರು. ಈ ವೇಳೆ ಮೂಡಿದ ಸ್ನೇಹ ಪ್ರೀತಿಗೆ ತಿರುಗಲು ಹೆಚ್ಚಿನ ಸಮಯ ಬೇಕಾಗಿರಲಿಲ್ಲ.

ಅಲ್ಲಿಂದ ಶುರುವಾದ ಪ್ರೀತಿಯ ಪಯಣ ಮದುವೆಗೆ ಬಂದು ನಿಂತಿದೆ. ಸದ್ಯಮೂರನೇ ಮದುವೆಯಾಗಿರುವ ನಟಿ ಹೊಸ ಜೀವನದ ನಿರೀಕ್ಷೆಯಲ್ಲಿದ್ದಾರೆ .

ಅಂದಹಾಗೆ ವನಿತಾ ವಿಜಯಕುಮಾರ್, ತಮಿಳಿನ ಖ್ಯಾತ ನಟ ಅರುಣ್ ವಿಜಯ್ ಅವರ ಸಹೋದರಿ. ಈ ಹಿಂದೆ ಪುನೀತ್ ರಾಜ್ ಕುಮಾರ್ ಅಭಿನಯದ ಚಕ್ರವ್ಯೂಹ ಸಿನಿಮಾದಲ್ಲಿ ಅರುಣ್ ನೆಗೆಟಿವ್ ರೋಲ್​ನಲ್ಲಿ ಕಾಣಿಸಿಕೊಂಡಿದ್ದರು.

- Advertisement -
spot_img

Latest News

error: Content is protected !!