- Advertisement -
- Advertisement -
ಮಂಗಳೂರು: ಗ್ಯಾಸ್ ಲಾರಿ ಏಕಾಏಕಿ ತಿರುವು ಪಡೆದುಕೊಂಡು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.
ಮಂಗಳೂರು ನಗರದ ಕೆಪಿಟಿ ಜಂಕ್ಷನ್ ಬಳಿ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಅಶೋಕ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಯೆಯ್ಯಾಡಿಯಿಂದ ಕೆಪಿಟಿ ಜಂಕ್ಷನ್ ನಲ್ಲಿರುವ ಪೆಟ್ರೋಲ್ ಪಂಪ್ ಗೆ ಬೈಕ್ ಸವಾರ ಬರುತ್ತಿದ್ದ ವೇಳೆ ಪಕ್ಕದಲ್ಲೇ ಚಲಿಸುತ್ತಿದ್ದ ಗ್ಯಾಸ್ ಲಾರಿ ಚಾಲಕ ಏಕಾಏಕಿ ಎಡಕ್ಕೆ ತಿರುವು ತೆಗೆದುಕೊಂಡಿದ್ದಾನೆ. ಈ ವೇಳೆ ಲಾರಿ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಕೆಳಕ್ಕೆ ಬಿದ್ದ ಬೈಕ್ ಸವಾರನ ಮೇಲೆ ಲಾರಿಯ ಚಕ್ರ ಹರಿದಿದ್ದು, ಅಶೋಕ್ ಸೊಂಟ ಹಾಗೂ ಬಲಗೈಗೆ ತೀವ್ರ ಹಾನಿಯಾಗಿದ್ದು, ಗಾಯಾಳು ಅಶೋಕ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕದ್ರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.
- Advertisement -