ಮಂಗಳೂರು: ಮದ್ಯಪಾನ ಮಾಡಿ ಪಿಜಿ ಡಾಕ್ಟರ್ ಓರ್ವ ಆಸ್ಪತ್ರೆಗೆ ಕರ್ತವ್ಯಕ್ಕೆ ಬಂದ ಘಟನೆ ಮಂಗಳೂರಿನಲ್ಲಿ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಪಿಜಿ ವೈದ್ಯ ಶ್ರೀಕಾಂತ್ ವಿಪರೀತ ಮದ್ಯ ಸೇವಿಸಿ ಆಸ್ಪತ್ರೆಗೆ ಬಂದು ಚಿಕಿತ್ಸೆ ನೀಡಲು ಮುಂದಾಗಿದ್ದರು ಎಂದು ವೈರಲ್ ವೀಡಿಯೊದಲ್ಲಿ ಹೇಳುತ್ತಿದ್ದಾರೆ.
ಆಸ್ಪತ್ರೆಯಲ್ಲಿ ರಾತ್ರಿ ಹೊರ ರೋಗಿಗಳ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ವೈದ್ಯ ಶ್ರೀಕಾಂತ್ ಮದ್ಯ ಸೇವನೆ ಮಾಡಿದ್ದಾರೆ ಎಂದು ರೋಗಿ ಕಡೆಯವರಿಂದ ತರಾಟೆಗೊಳಗಾಗಿದ್ದಾರೆ.
ಮದ್ಯ ಸೇವಿಸಿದ್ದ ಕಾರಣ ಬಿದ್ದು ವೈದ್ಯ ಶ್ರೀಕಾಂತ್ ಧರಿಸಿದ್ದ ಬಟ್ಟೆ ಪೂರ್ತಿ ಗಲೀಜಾಗಿದ್ದು, ಅದೇ ಬಟ್ಟೆಯಲ್ಲಿಯೇ ಒಪಿಡಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು ಎಂದು ವೀಡಿಯೊದಲ್ಲಿ ಜನ ಹೇಳುತ್ತಿದ್ದಾರೆ .
ರೋಗಿಗಳ ಕಡೆಯವರಿಂದ ತರಾಟೆಗೊಳಗಾದ ಬಳಿಕ ಮದ್ಯಪಾನಿ ವೈದ್ಯ ಶ್ರೀಕಾಂತ್ ರನ್ನು ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದಾರೆ.


