Wednesday, June 24, 2026
Homeಕರಾವಳಿಸುಳ್ಯ: ;ಚಹಾ ಮಾಡಲೆಂದು ಗ್ಯಾಸ್ ಉರಿಸುವಾಗ ಸಿಲಿಂಡರ್ ಗೆ ಹತ್ತಿಕೊಂಡ ಬೆಂಕಿ

ಸುಳ್ಯ: ;ಚಹಾ ಮಾಡಲೆಂದು ಗ್ಯಾಸ್ ಉರಿಸುವಾಗ ಸಿಲಿಂಡರ್ ಗೆ ಹತ್ತಿಕೊಂಡ ಬೆಂಕಿ

- Advertisement -
- Advertisement -

ಸುಳ್ಯ: ಚಹಾ ಮಾಡಲೆಂದು ಗ್ಯಾಸ್ ಉರಿಸುವಾಗ ಸಿಲಿಂಡರ್ ಗೆ ಬೆಂಕಿ ಹತ್ತಿಕೊಂಡ ಘಟನೆ ಸುಳ್ಯ ತಾಲೂಕಿನ  ಮರ್ಕಂಜದ  ಹೈದಂಗೂರು  ಎಂಬಲ್ಲಿ ನಡೆದಿದೆ.

ಹೈದಂಗೂರು ಬಳಿಯ ಈಂದುಗುಂಡಿ ರಾಧಾಕೃಷ್ಣ ನಾಯಕ್ ಎಂಬವರ ಮನೆಯಲ್ಲಿ ನಿನ್ನೆ ಸಂಜೆ ಚಹಾ ಮಾಡಲೆಂದು ಅಡುಗೆ ಕೋಣೆಗೆ ಹೋದಾಗ ಗ್ಯಾಸ್ ವಾಸನೆ ಬರ ತೊಡಗಿದೆ. ಗ್ಯಾಸ್ ಸ್ಟವ್ ಉರಿಸಲು ಮುಂದಾದಾಗ ಒಮ್ಮೆಲೆ ಗ್ಯಾಸ್ ಹಂಡೆಗೆ ಬೆಂಕಿ ಹಿಡಿಯೆತ್ತೆನ್ನಲಾಗಿದೆ.

ವಿಷಯ ತಿಳಿದು ಅಕ್ಕಪಕ್ಕದವರು,  ರೆಂಜಾಳ ಶಾಸ್ತಾವು ಯುವಕ ಮಂಡಲದ ಸದಸ್ಯರು, ಹೈದಂಗೂರು ಪರಿಸರದವರು ಬಂದು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸುಮಾರು 7.45ರ ವೇಳೆಗೆ ಸುಳ್ಯದ ಅಗ್ನಿಶಾಮಕ ದಳದವರು  ಆಗಮಿಸಿ, ಗ್ಯಾಸ್ ಹಂಡೆಯ ರೆಗ್ಯುಲೇಟರ್ ನ್ನು ಆಫ್ ಮಾಡಿ ಬೆಂಕಿ ನಂದಿಸಿ, ಸಂಭಾವ್ಯ ಅವಘಡವನ್ನು ತಪ್ಪಿಸಿದ್ದಾರೆ.

- Advertisement -

Latest News

error: Content is protected !!