Friday, May 10, 2024
Homeಕರಾವಳಿಉಡುಪಿಬೈಂದೂರು: ಟೋಲ್ ಗೇಟ್ ಸಮೀಪ ನಿಲ್ಲಿಸಿದ್ದ ಲಾರಿಯ 5 ಚಕ್ರ ಕಳವು

ಬೈಂದೂರು: ಟೋಲ್ ಗೇಟ್ ಸಮೀಪ ನಿಲ್ಲಿಸಿದ್ದ ಲಾರಿಯ 5 ಚಕ್ರ ಕಳವು

spot_img
- Advertisement -
- Advertisement -

ಬೈಂದೂರು: ಶಿರೂರು ಟೋಲ್ ಗೇಟ್ ಸಮೀಪ ನಿಲ್ಲಿಸಿದ್ದ ಲಾರಿಯ 5 ಚಕ್ರಗಳನ್ನು ಕಳವು ಮಾಡಿರುವ ಘಟನೆ ಸೆ.14 ರಂದು ರಾತ್ರಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಲಾರಿ ಚಾಲಕ ಪುರುಷೋತ್ತಮ ತಾಂಡೇಲ್ ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.

ಸೆ.14 ರಂದು ತಮ್ಮ ಮನೆಯಿಂದ ಲಾರಿಯಲ್ಲಿ ಮಗ ಸಾಹಿಲ್ ನ ಜೊತೆಯಲ್ಲಿ ಹೊರಟಿದ್ದರು. ರಾತ್ರಿ 9 ಗಂಟೆ ವೇಳೆ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಶಿರೂರು ಟೋಲ್ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯನ್ನು ನಿಲ್ಲಿಸಿ ಮಗನೊಂದಿಗೆ ಲಾರಿಯಲ್ಲಿ ಮಲಗಿದ್ದರು. ಮರುದಿನ ಸೆ.15 ರಂದು ಬೆಳಿಗ್ಗೆ 4 ಗಂಟೆ ವೇಳೆ, ಎದ್ದು ಹೊರಡಲು ಲಾರಿಯನ್ನು ಸ್ಟಾರ್ಟ್ ಮಾಡಲು ಮುಂದಾದಾಗ ಲಾರಿಯು ಒಂದು ಭಾಗಕ್ಕೆ ವಾಲಿಕೊಂಡಿದ್ದು ಗಮನಕ್ಕೆ ಬಂದಿದೆ. ಕೂಡಲೇ ಲಾರಿಯನ್ನು ಪರಿಶೀಲಿಸಿದಾಗ ಲಾರಿಯ ಹಿಂದಿನ 4 ಚಕ್ರಗಳು ಹಾಗೂ ಹೆಚ್ಚುವರಿಯಾಗಿ ಇಟ್ಟಿದ್ದ ಚಕ್ರವೂ ಕಳವಾಗಿರುವುದು ಕಂಡು ಬಂದಿದೆ. ಕಳವಾದ 5 ಚಕ್ರಗಳ ಮೌಲ್ಯ 1,85,000 ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!