Thursday, June 4, 2026
Homeಕರಾವಳಿಕಡಬ: ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಬಿರುಕು ಬಿಟ್ಟ ಮನೆಯ ಗೋಡೆ, ಲಕ್ಷಾಂತರ ರೂ ನಷ್ಟ

ಕಡಬ: ಗ್ಯಾಸ್ ಸಿಲಿಂಡರ್ ಸ್ಪೋಟದಿಂದ ಬಿರುಕು ಬಿಟ್ಟ ಮನೆಯ ಗೋಡೆ, ಲಕ್ಷಾಂತರ ರೂ ನಷ್ಟ

- Advertisement -
- Advertisement -

ಕಡಬ: ತಾಲೂಕಿನ ಬಲ್ಯ ಗ್ರಾಮದ ಕೇರ್ನಡ್ಕ ನಿವಾಸಿ ದರ್ಣಪ್ಪ‌ ಗೌಡರ ಮನೆಯಲ್ಲಿ ಅಡುಗೆಗೆ ಬಳಸುವ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದು ಅಪಾರ ನಷ್ಟ ಸಂಭವಿಸಿದೆ.

ಸ್ಪೋಟದ ತೀವ್ರತೆಗೆ ಗೊಡೆ ಬಿರುಕು ಬಿಟ್ಟು, ಮನೆಯ ಛಾವಣಿಗೆ ಭಾಗಶಃ ಕುಸಿದಿದೆ. ಕೊಣೆಯಲ್ಲಿದ್ದ ವಸ್ತುಗಳಿಗೂ ಹಾನಿಯಾಗಿದೆ. ಸದ್ಯ ಮನೆ ಮಂದಿ ಅಪಾಯದಿಂದ ಪಾರಾಗಿದ್ದು ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಷಯ ತಿಳಿದ ಗ್ಯಾಸ್ ಏಜೆನ್ಸಿಯವರು ಸ್ಥಳಕ್ಕೆ ಧಾವಿಸಿ, ಹೊಸ ಗ್ಯಾಸ್ ಕನೆಕ್ಷನ್ ನೀಡಿದ್ದಾರೆ. ಅಲ್ಲದೇ ಸ್ಥಳ ಸಮೀಕ್ಷೆ ನಡೆಸಿ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!